

ಸುಳ್ಯ: ನಗರದಲ್ಲಿ ಕುಡಿಯುವ ನೀರಿಗಾಗಿ ಪೈಪ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯಿಂದಾಗಿ ನಗರದ ರಸ್ತೆಗಳು ಕೆಂಬಣ್ಣಕ್ಕೆ ತಿರುಗಿವೆ. ಕಾಮಾಗಾರಿಯ ಪರಿಣಾಮ ಟ್ರಾಫಿಕ್ ಜಾಮ್ ಕೂಡಾ ಆಗುತ್ತಿದೆ.
ರಸ್ತೆಯಲ್ಲಿ ನಡೆದಾಡುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು, ವಾಹನ ಸವಾರರು ಧೂಳನ್ನೇ ಉಸಿರಾಡುವಂತಾಗಿದೆ. ಕಾಮಗಾರಿಯ ಗುತ್ತಿಗೆ ಪಡೆದುಕೊಂಡವರು ಸಮಸ್ಯೆ ಪರಿಹಾರಕ್ಕಾಗಿ ರಸ್ತೆಗೆ ನೀರು ಚಿಮುಕಿಸುವ ಕಾರ್ಯಕ್ಕೆ ಮುಂದಾಗಬೇಕಾದರೂ ಅದಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.
ಪೈಪ್ ಅಳವಡಿಕೆ ಕಾಮಗಾರಿ ಸುಳ್ಯ ಜಾತ್ರೋತ್ಸವದ ಮೊದಲು ಪೂರ್ಣಗೊಳ್ಳದಿದ್ದರೆ ಸಮಸ್ಯೆ ಮತ್ತೆ ಉಲ್ಬಣವಾಗುವುದು ಸಹಜ. ಹಾಗಾಗಿ ಕಾಮಗಾರಿಗೆ ವೇಗ ತಂದು ಪ್ರಸ್ತುತ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಾಗಿದೆ.