ಸಂಪ್ರದಾಯಬದ್ಧ ದಸರಾ: ನವರಾತ್ರಿ ಪೂರ್ವಭಾವಿ ಸಭೆ ನಿರ್ಣಯ

sabhe
ಕೊಕ್ಕರ್ಣೆ ದಸರಾ-2024ರ ಪೂರ್ವಭಾವಿ ಸಭೆ ನಡೆಯಿತು.ಅಧ್ಯಕ್ಷ ಹರೀಶ್ ಶಾನುಭಾಗ್, ಅರ್ಚಕ ರಾಘವೇಂದ್ರ ಪಡಿಯಾರ್, ಪ್ರಮುಖರಾದ ಸಂಜೀವ ಮಾಸ್ತರ್ ಕೊಕ್ಕರ್ಣೆ, ವೆಂಕಟೇಶ್ ಸುವರ್ಣ ಮೊದಲಾದವರಿದ್ದರು
Published on

ಕೊಕ್ಕರ್ಣೆ: ಕೊಕ್ಕರ್ಣೆ ದಸರಾ-2024ರ ಪೂರ್ವಭಾವಿ ಸಭೆ ಭಾನುವಾರ ಕೊಕ್ಕರ್ಣೆ ಕೆಳಪೇಟೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿತು.
ಸುಮಾರು 31 ವರ್ಷದಿಂದ ಶ್ರೀಕ್ಷೇತ್ರದಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು, ಕಳೆದ ಎರಡು ವರ್ಷಗಳಿಂದ ‘ಕೊಕ್ಕರ್ಣೆ ದಸರಾ’ ಹೆಸರಲ್ಲಿ ಆಚರಿಸಲಾಗುತ್ತಿದೆ. ಈ ಬಾರಿ ನವರಾತ್ರಿ ದಸರಾ ಕಾರ್ಯಕ್ರಮ ಅ.3ರಂದು ಆರಂಭಗೊಂಡು 12ರ ತನಕ ಸಂಪ್ರದಾಯ ಬದ್ಧವಾಗಿ ಸಾಂಸ್ಕೃತಿಕ, ಧಾರ್ಮಿಕವಾಗಿ ವಿಭಿನ್ನ ರೀತಿಯಲ್ಲಿ ಆಚರಿಸಲು ನಿರ್ಣಯಿಸಲಾಯಿತು. ವಿವಿಧ ಸಮಿತಿ ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ಅಧ್ಯಕ್ಷ ಹರೀಶ್ ಶಾನುಭಾಗ್, ಅರ್ಚಕ ರಾಘವೇಂದ್ರ ಪಡಿಯಾರ್, ಪ್ರಮುಖರಾದ ಸಂಜೀವ ಮಾಸ್ತರ್ ಕೊಕ್ಕರ್ಣೆ, ವೆಂಕಟೇಶ್ ಸುವರ್ಣ, ಎಂ.ಆನಂದ ಮರಕಾಲ, ಉದಯ ಶೆಟ್ಟಿ ಗೊರಟಿ, ಬಿ.ಮಾಧವ ಪೈ, ಶ್ರೇಯಸ್ ಶೆಟ್ಟಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಕ್ಕರ್ಣೆ ವಲಯ ಮೇಲ್ವಿಚಾರಕ ಗಣೇಶ್, ಶ್ರೀನಿವಾಸ ನಾಯಕ್ ಚೆಗ್ರಿಬೆಟ್ಟು, ಡಾ.ಸುನೀತಾ ಶೆಟ್ಟಿ, ಪ್ರಸನ್ನ ಶೆಟ್ಟಿ ಹಳ್ಳಿ, ಸಂತೋಷ್ ಕಲ್ಗೋಳಿ, ರಾಜೀವ ಪೂಜಾರಿ, ಆನಂದ ಮರಕಾಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net