ತಡರಾತ್ರಿ ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ದುರ್ಮರಣ

accident
Published on

ವಿಜಯನಗರ(ಹೊಸಪೇಟೆ): ಹರಪನಹಳ್ಳಿ ತಾಲೂಕಿನ ಅಡವಿಹಳ್ಳಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ನಿಂತಿದ್ದ ಟ್ರ್ಯಾಕ್ಟರ್​ಗೆ ಟಾಟಾಏಸ್​ ಡಿಕ್ಕಿಯಾಗಿದ್ದು, ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ಹೊಳಿಯಮ್ಮ(32), ದೊಡ್ಡಹಾಳು ಹನುಮಂತಪ್ಪ (46) ಹಾಗೂ ಲಕ್ಷ್ಮವ್ವ (42) ಮೃತ ದುರ್ದೈವಿಗಳು. ನಾಲ್ವರು ಗಾಯಗೊಂಡಿದ್ದಾರೆ. ಇವರೆಲ್ಲರೂ ಟ್ರ್ಯಾಕ್ಟರ್​ನಲ್ಲಿ ಹರಪನಹಳ್ಳಿಯಿಂದ ಕೊಟ್ಟೂರು ಪಟ್ಟಣಕ್ಕೆ ಜವಳ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಇದನ್ನೂ ಓದಿರಿ ರಾಮಮಂದಿರ ನಿರ್ಮಾಣಕ್ಕೆ ಹಣ ಕೊಡದವರ ಮನೆಗಳ ಗುರುತು: ಮಾಜಿ ಸಿಎಂ ಎಚ್​ಡಿಕೆ ಆತಂಕ

ರಸ್ತೆಬದಿ ನಿಂತಿದ್ದ ಟ್ರ್ಯಾಕ್ಟರ್​ಗೆ ಟಾಟಾ ಏಸ್​ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಹೊಳಿಯಮ್ಮ ಮತ್ತು , ದೊಡ್ಡಹಾಳು ಹನುಮಂತಪ್ಪ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೊರಾಡುತ್ತಿದ್ದ ಲಕ್ಷ್ಮವ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸೋಮವಾರ ಕೊನೆಯುಸಿರೆಳೆದರು.

ಮೃತರು ಮತ್ತು ಗಾಯಾಳುಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಟ್ಟೆಗೇನಹಳ್ಳಿ ಗ್ರಾಮದವರು. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net