

ಬೆಂಗಳೂರು: ಓವರ್ ಸ್ಪೀಡ್ ವಾಹನಗಳಿಗೆ ಫೈನ್ ಹಾಕುತ್ತಾ ನಿಂತಿದ್ದ ಕರ್ತವ್ಯನಿರತ ಎಎಸ್ಐ ಹೃದಯಾಘಾತಕ್ಕೆ ಬಲಿಯಾದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸೋಮವಾರ ಸಂಭವಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಚಾರಿ ಠಾಣೆಯ ಎಎಸ್ಐ ಹಿರಿಯಣ್ಣ ಮೃತರು. ಇಂದು ಮಧ್ಯಾಹ್ನ 1.30ರ ವೇಳೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಎಎಸ್ಐ ಕುಸಿದು ಬಿದ್ದರು. ಕೂಡಲೇ ಅವರನ್ನು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸಲಿಲ್ಲ. ಇದನ್ನೂ ಓದಿರಿ ಕರ್ತವ್ಯನಿರತ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ಗೆ ಹೃದಯಾಘಾತ, ಸಾವು
ಇಂತಹದ್ದೇ ದುರ್ಘಟನೆ ಇಂದು ಸಂಜೆ ನೆಲಮಂಗಲದಲ್ಲೂ ಸಂಭವಿಸಿದ್ದು, ಕರ್ತವ್ಯನಿರತ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಸೋಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಮೂಲದ ಹಿರಿಯಣ್ಣ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.