ಟ್ರಾಕ್ಟರ್, ಹುಂಡಿ ಹಣ ಕಳವು ಆರೋಪಿ ವಶಕ್ಕೆ

ಕೌದಳ್ಳಿಯ ಶ್ರೀ ದಂಡಿನ ಮಾರಮ್ಮನ ದೇಗುದಲ್ಲಿ ಹುಂಡಿ ಹಣ ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದರು.
ಕೌದಳ್ಳಿಯ ಶ್ರೀ ದಂಡಿನ ಮಾರಮ್ಮನ ದೇಗುದಲ್ಲಿ ಹುಂಡಿ ಹಣ ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದರು.
Published on

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಶ್ರೀ ದಂಡಿನ ಮಾರಿಯಮ್ಮ ದೇಗುಲದಲ್ಲಿ ಹುಂಡಿಯ ಹಣವನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದ ಅವಿನಾಶ್ ಬಂಧಿತ ಆರೋಪಿ.
ಬುಧವಾರ ಮುಂಜಾನೆ 4 ಗಂಟೆ ಸಮಯದಲ್ಲಿ ದಂಡಿನ ಮಾರಿಯಮ್ಮ ದೇಗುಲದ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಗಸ್ತಿನಲ್ಲಿದ್ದ ಎಸ್‌ಐ ಲೋಕೇಶ್ ಹಾಗೂ ಕಾನ್‌ಸ್ಟೆಬಲ್ ರಾಜು ವಿಚಾರಿಸಿದಾಗ ಹುಂಡಿ ಹಣ ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಈತನ ಬಳಿಯಿದ್ದ 9,600 ರೂ.ಗಳನ್ನು ವಶಪಡಿಸಿಕೊಂಡು ಠಾಣೆಗೆ ಕರೆದೊಯ್ಯಲಾಗಿದೆ. ಡಿವೈಎಸ್ಪಿ ಸೋಮೇಗೌಡ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಸಮ್ಮುಖದಲ್ಲಿ ಇನ್ನಷ್ಟು ವಿಚಾರಣೆಗೆ ಒಳಪಡಿಸಿದಾಗ, 2 ದಿನದ ಹಿಂದೆ ಮಹದೇಶ್ವರ ಬೆಟ್ಟದಲ್ಲಿ ಟ್ರಾೃಕ್ಟರ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೌದಳ್ಳಿ ಗ್ರಾಮದ ಹೊರವಲಯದ ಮುಳ್ಳಿನ ಪೊದೆಯಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ಅನ್ನು ನಂತರ ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಎಸ್‌ಐ ಗುರುಸ್ವಾಮಿ, ಸಿಬ್ಬಂದಿ ಗಿರೀಶ್, ನಾಗೇಂದ್ರ, ಲಿಯಾಖತ್ ಆಲಿಖಾನ್, ಸಂಜಯ್, ಪವಾರ್, ಬೀರಾದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net