ನೇಪಾಳದಿಂದ ನಾಡಿಗೆ ಮರಳಿದ ಪ್ರವಾಸಿಗರು

FotoJet11111111
Published on

ಬೆಂಗಳೂರಿನ 49 ಮಂದಿಯೊಂದಿಗೆ ಸುರಕ್ಷಿತವಾಗಿ ಮನೆ ಸೇರಿದ ನಂದೀಶ್

ರಾಮನಗರ: ನೇಪಾಳದ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ 50 ಪ್ರವಾಸಿಗರೊಂದಿಗೆ ಜಿಲ್ಲೆಯ ನಂದೀಶ್‌ಕುಮಾರ್ ಸಹ ಶನಿವಾರ ಸಂಜೆ ಸುರಕ್ಷಿತವಾಗಿ ಮನೆಗೆ ಮರಳಿದರು.

ಸೆ.5ರಂದು ಜಿಲ್ಲೆಯ ನಂದೀಶ್ ಕುಮಾರ್ ಸೇರಿ ಬೆಂಗಳೂರಿನಿಂದ ಒಟ್ಟು 50 ಮಂದಿ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ಆದರೆ ನೇಪಾಳದಲ್ಲಿ ಸ್ಥಳೀಯರು ಸರ್ಕಾರದ ವಿರುದ್ಧ ಧಂಗೆ ಎದ್ದ ಪರಿಣಾಮ ಎಲ್ಲರೂ ಕಠ್ಮಂಡುವಿನಲ್ಲಿ ಸಿಲುಕಿದ್ದರು. ಮೂರು ದಿನಗಳ ಕಾಲ ಹೋಟೆಲ್‌ಲ್ಲೇ ಬಂಧಿಯಾಗಿ, ರಾಜ್ಯಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಮೂರು ದಿನಗಳಿಂದ ಪರಿಸ್ಥಿತಿ ಸುಧಾರಿಸಿದ ಕಾರಣ, ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡ ಅಲ್ಲಿನ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಹಿನ್ನೆಲೆಯಲ್ಲಿ ಅಲ್ಲಿನ ಸೈನಿಕರು ಪ್ರವಾಸಿ ವಾಹನಗಳ ಓಡಾಟಕ್ಕೆ ಭದ್ರತೆ ಒದಗಿಸಿ, ರಾಜ್ಯದ ಪ್ರವಾಸಿ ತಂಡವನ್ನು ಜನಕ್‌ಪುರ್ ಮಾರ್ಗವಾಗಿ ಜಾರ್ಖಂಡ್‌ನ ದೇವಗರ್‌ಗೆ ಕಳುಹಿಸಿದ್ದು, ಅಲ್ಲಿಂದ ಬಾಬಾ ಬೈದ್ಯನಾಥ್ ದರ್ಶನ ಮಾಡಿ ದೇವಗರ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬಂದು, ಸುರಕ್ಷಿತವಾಗಿ ಮನೆ ಸೇರಿದ್ದಾರೆ.

ಊಟಕ್ಕೆ ಸಮಸ್ಯೆಯಾಗಿತ್ತು: ವಿಜಯವಾಣಿಯೊಂದಿಗೆ ಪ್ರವಾಸಿಗ ನಂದೀಶ್‌ಕುಮಾರ್ ಮಾತನಾಡಿ, ನೇಪಾಳ ಧಂಗೆ ಕಾರಣ ನಮಗೆ ಆಹಾರ ಸಮಸ್ಯೆ ಆಗಿತ್ತು. ಹಾಲು, ತರಕಾರಿ ಸಿಗುತ್ತಿರಲಿಲ್ಲ. ಸುರಕ್ಷತೆ ಇತ್ತು. ಆದರೆ ಓಡಾಟ ಸಾಧ್ಯವಾಗಿರಲಿಲ್ಲ. ನೇಪಾಳ ಸೇನೆ ನಮಗೆ ಭಾರತ ಗಡಿ ಪ್ರವೇಶಿಸಲು ಸೂಕ್ತ ವ್ಯವಸ್ಥೆ ಮಾಡಿಕೊಟ್ಟಿತು. ಸುರಕ್ಷಿತವಾಗಿ ಎಲ್ಲರೂ ಮನೆ ಸೇರಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net