

ಗುಂಡ್ಲುಪೇಟೆ: ಬಂಡೀಪುರ ಊಟಿ ರಸ್ತೆಯಲ್ಲಿ ಬುಧವಾರ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡ ಪ್ರವಾಸಿಗರು ಖುಷಿಪಟ್ಟರು.
ಬಂಡೀಪುರ ಅರಣ್ಯ ಮಾರ್ಗವಾಗಿ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಬ್ಬಾವು ಕಾಣಿಸಿಕೊಂಡ ಕೂಡಲೇ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಎರಡೂ ಬದಿಯಲ್ಲಿ ಬರುತ್ತಿದ್ದ ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದರು. ಸುಮಾರು 10 ಅಡಿಗಿಂತಲೂ ಉದ್ದವಾಗಿದ್ದ ಹಾವು ರಸ್ತೆಯನ್ನು ನಿಧಾನಕ್ಕೆ ದಾಟಿ ಮತ್ತೊಂದು ಬದಿಗೆ ಹೋಗುವ ವಿಡಿಯೋವನ್ನು ಪ್ರವಾಸಿಗರು ಸೆರೆಹಿಡಿದು ವೈರಲ್ ಮಾಡಿದ್ದಾರೆ.