

ಬೆಂಗಳೂರು: ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ ಟೊಟೊ ಪುರಸ್ಕಾರಕ್ಕೆ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಟಿ.ಎಫ್.ಎ. (ಟೊಟೊ ಫಂಡ್ಸ್ ದಿ ಆರ್ಟ್ಸ್) ಸ್ಥಾಪಿಸಿರುವ ಈ ಪುರಸ್ಕಾರ 60 ಸಾವಿರ ರೂ. ನಗದು ಬಹುಮಾನ ಒಳಗೊಂಡಿದೆ.
ಈ ಪುರಸ್ಕಾರ ಪಡೆಯಲು ಭಾರತೀಯ ನಾಗರಿಕರಿಗೆ ಮಾತ್ರ ಅವಕಾಶವಿದ್ದು, ಬರಹಗಾರರು 18ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಕಥೆ, ಕವಿತೆ ಅಥವಾ ನಾಟಕ ಪ್ರಕಾರದಲ್ಲಿ ಪ್ರವೇಶಗಳನ್ನು ಕಳಿಸಬಹುದು. ಈ ಮೂರೂ ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.
ಪ್ರವೇಶಗಳನ್ನು ಕಳುಹಿಸಲು ಸೆ.15 ಕೊನೆಯ ದಿನವಾಗಿದ್ದು, ಪ್ರವೇಶ ಪತ್ರವನ್ನು https://totofundsthearts.org/ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬರಹ ಮತ್ತು ಪ್ರವೇಶಪತ್ರವನ್ನು totokannadagmail.com ಗೆ ಕಳುಹಿಸಬೇಕು ಎಂದು ಟಿಎಫ್ಎ ಪ್ರಕಟಣೆ ತಿಳಿಸಿದೆ.