

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 24ಗಿ7 ನ್ಯೂಸ್ ಮಾಧ್ಯಮ ಸಹಯೋಗದೊಂದಿಗೆ ಸಿಂಹ ಭೂಮಿ ಮತ್ತು ಚಿಗುರು ಕಲ್ಚರಲ್ ಟ್ರಸ್ಟ್ ವತಿಯಿಂದ ಯಲಹಂಕ ಉಪನಗರದ ಅಂಬೇಡ್ಕರ್ ಭವನದಲ್ಲಿ ಮಾ.14 ರಂದು ‘ಕುದಿಮೌನ’ ಏಕವ್ಯಕ್ತಿ ಮಹಿಳಾ ನಾಟಕ, ಮಾತು ಮೌನಗಳ ಜುಗಲ್ಬಂದಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಶಾಸಕ ಎಸ್.ಆರ್. ವಿಶ್ವನಾಥ್, ತಹಸೀಲ್ದಾರ್ ಎನ್. ರಘುಮೂರ್ತಿ, ಬಿಬಿಎಂಪಿ ಜಂಟಿ ಆಯುಕ್ತ ಡಾ. ಅಶೋಕ್, ಉಪ ಪೊಲೀಸ್ ಆಯುಕ್ತ ಶ್ರೀನಿವಾಸ್, ಪಾಲಿಕೆ ಸದಸ್ಯರಾದ ಸತೀಶ್, ನೇತ್ರಾ ಪಲ್ಲವಿ, ಪದ್ಮಾವತಿ ಉಪಸ್ಥಿತರಿರುವರು.
ರಂಗ ಬ್ರಹ್ಮ ಡಾ. ಎಸ್.ಎಲ್.ಎನ್. ಸ್ವಾಮಿ ಅವರ ರಚನೆ, ವಿನ್ಯಾಸ ಹಾಗೂ ನಿರ್ದೇಶನದಲ್ಲಿ ‘ಕುದಿಮೌನ’ ವಿಭಿನ್ನ ರಂಗಪ್ರಯೋಗ ನಡೆಯಲಿದೆ. ವಿದುಷಿ ಸಂತೋಷಿ ಪ್ರಸಾದ್ ಅಭಿನಯಿಸಲಿದ್ದಾರೆ.
ನೈಜ ಘಟನೆ ಆಧಾರಿತ ಕುದಿಮೌನ: ಇತ್ತೀಚಿಗೆ ಹೈದರಾಬಾದ್ನ ಪಶು ವೈದ್ಯೆ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯೊಬ್ಬನ ತಾಯಿಯ ಪರಿಸ್ಥಿತಿ ಕುರಿತ ನೈಜ ಘಟನೆ ಆಧಾರಿತ ವಸ್ತು ವಿಷಯಗಳ ಒಳಗೊಂಡ ಕಲ್ಪನೆಯ ಕಥೆಯಾಗಿದೆ. ಇದನ್ನು ಸಮಾಜದ ಮುಂದಿಡುವ ಕಾರ್ಯವನ್ನು ಡಾ. ಎಸ್.ಎಲ್.ಎನ್. ಸ್ವಾಮಿ ವಿಭಿನ್ನ ರಂಗಪ್ರಯೋಗದ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ. ಇದರಲ್ಲಿ ತಾಯಿಯ ಮನದಾಳದ ಮೌನ, ನೋವು ಅಡಗಿದ್ದು, ಮಾತನಾಡದೆ ತುಮುಲಗಳನ್ನು ಧ್ವನಿಮುದ್ರಿತ ರೂಪದಲ್ಲಿ ನೀಡಲಾಗುತ್ತಿದೆ.
ವಿಶ್ವಮಹಿಳಾ ದಿನಕ್ಕಾಗಿ ವಿಶ್ವದಾಖಲೆ: ಕುದಿಮೌನ ಒಬ್ಬ ತಾಯಿಯ ಪರಿಸ್ಥಿತಿಯಾಗಿರದೆ ಎಲ್ಲ ತಾಯಂದಿರ ಪರಿಸ್ಥಿತಿಯಾಗಿದೆ. ಹೆತ್ತು ಹೊತ್ತು, ಸಾಕಿ-ಸಲುಹಿದ ಮಗನನ್ನು ತಾಯಿ ಅಪರಾಧಿಯಾಗಿ ಹೇಗೆ ಸ್ವೀಕರಿಸುತ್ತಾರೆ ಎಂಬು ದನ್ನು ನಾಟಕದಲ್ಲಿ ಸೆರೆ ಹಿಡಿದ್ದಾರೆ. ಮಗನನ್ನು ಸಮರ್ಥಿಸಿಕೊಂಡರೆ ಆಪ ರಾಧವನ್ನು ಸಮರ್ಥಿಸಿಕೊಂಡಂತೆ ಎಂಬ ಭಾವನೆ ಹೇಗೆ ಕಾಡುತ್ತದೆ. ಮಗನ ಸಾವು ಒಬ್ಬ ಅತ್ಯಾಚಾರಿಯ ಸಾವಾಗಿದ್ದು, ಸಂಪೂರ್ಣ ಅತ್ಯಾಚಾರದ ಸಾವಲ್ಲ ಎಂಬುದನ್ನು ತರ್ಕದೊಂದಿಗೆ ನಾಟಕ ರೂಪದಲ್ಲಿ ತಿಳಿಸಲಾಗುತ್ತಿದೆ.
ಏಷ್ಯಾ ಬುಕ್ ಆಫ್ ರೆಕಾರ್ಡ್ಸ್
ನಾಟಕದ ವಸ್ತು ವಿಷಯ ಹಾಗೂ ಏಕವ್ಯಕ್ತಿ ಮಹಿಳಾ ಪ್ರದರ್ಶನದಿಂದ ಕುದಿಮೌನ ವಿಶ್ವದಾಖಲೆ ನಿರ್ವಿುಸಲು ಸಜ್ಜಾಗಿದೆ. ನಾಟಕ ಪ್ರದರ್ಶನ ವೇಳೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತೀರ್ಪಗಾರರು ಹಾಜರಿರುತ್ತಾರೆ. ಪ್ರದರ್ಶನದ ನಂತರ ದಾಖಲೆಯನ್ನು ಪ್ರಕಟಪಡಿಸುತ್ತಾರೆ.