ಕಾಸರಗೋಡು: ಕೇರಳ ಪ್ರದೇಶ ಶಾಲಾ ಶಿಕ್ಷಕರ ಸಂಘಟನೆ(ಕೆಪಿಎಸ್‌ಟಿಎ) ರಾಜ್ಯ ಪ್ರದೇಶ ವಿಶೇಷ ಮಹಿಳಾ ಸಮಾವೇಶ ಸೆ. 7ರಂದು ಉದುಮ ಐಶ್ವರ್ಯ ಸಭಾಂಗಣದಲ್ಲಿ ಜರುಗಲಿದ್ದು, ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ವಯನಾಡು, ಮಲಪ್ಪುರಂ ಜಿಲ್ಲೆಗಳ 500 ಮಹಿಳಾ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ಸಂಘಟನೆ ಜಿಲ್ಲಾ ಕಾರ್ಯದರ್ಶಿ ಪಿ.ಟಿ ಬೆನ್ನಿ ತಿಳಿಸಿದರು.
ಎಐಸಿಸಿ ಸದಸ್ಯೆ, ವಕೀಲೆ ಬಿಂದು ಕೃಷ್ಣ ಸಮಾವೇಶ ಉದ್ಘಾಟಿಸುವರು. ಜಿಲ್ಲಾ ಸಾಂಸ್ಕೃತಿಕ ವೇದಿಕೆ ಸಿದ್ಧಪಡಿಸಿರುವ ‘ಸ್ಮತಿತರಂಗ್’ ಎಂಬ ನೃತ್ಯ ಮತ್ತು ಸಂಗೀತ ಶಿಲ್ಪ 33 ಮಂದಿ ಮಹಿಳಾ ಶಿಕ್ಷಕರು ಪ್ರಸ್ತುತಪಡಿಸಲಿದ್ದಾರೆ. ಜಿಪಂ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾಕೃಷ್ಣನ್, ಬ್ಲಾಕ್ ಸದಸ್ಯೆ ಪುಷ್ಪಾ ಶ್ರೀಧರನ್ ಪಾಲ್ಗೊಳ್ಳುವರು.
ಕೇರಳ ಕೇಂದ್ರೀಯ ವಿವಿ ಶಿಕ್ಷಣ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ.ಮೇರಿ ವಿನೀತಾ ಥಾಮಸ್ ಮಹಿಳಾ ಸಬಲೀಕರಣ ಕುರಿತು ಉಪನ್ಯಾ ನೀಡಲಿದ್ದಾರೆ. ರಾಜ್ಯ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಪಿ.ರಶೀದಾ, ಸಂಚಾಲಕಿ ಪಿ.ಚಂದ್ರಮತಿ, ಕೆಪಿಎಸ್‌ಟಿಎ ರಾಜ್ಯ ಹಿರಿಯ ಉಪಾಧ್ಯಕ್ಷ ಟಿ.ಎ.ಶಾಹಿದಾ ರಹಮಾನ್, ರಾಜ್ಯ ಪದಾಧಿಕಾರಿಗಳಾದ ಎಂ.ಕೆ.ಅರುಣಾ, ಕೆ.ದೀಪಾ, ಸಿ.ಪಿ.ಸಂಧ್ಯಾ, ಸ್ವಪ್ನಾ ಜಾರ್ಜ್ ಪಾಲ್ಗೊಳ್ಳುವರು. ಸಮಾರೋಪ ಸಮಾರಂಭದಲ್ಲಿ ಸಂಘಟನೆ ಸಮಕಾಲೀನ ಪ್ರಸ್ತುತತೆ ವಿಷಯ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಅರವಿಂದನ್ ತರಗತಿ ನಡೆಸಲಿದ್ದಾರೆ. ರಾಜ್ಯಾಧ್ಯಕ್ಷ ಕೆ.ಅಬ್ದುಲ್ ಮಜೀದ್ ಮುಖ್ಯಭಾಷಣ ಮಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ವಾಸುದೇವನ್ ನಂಬೂದಿರಿ, ಮಹಿಳಾ ವೇದಿಕೆ ರಾಜ್ಯ ಸಂಚಾಲಕಿ ಚಂದ್ರಮತಿ ಪಿ., ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಮಲ್ಲಿಕಾ ಪಿ.ವಿ., ಸಂಚಾಲಕಿ ಜಯಶ್ರೀ ಪಿ.ಟಿ., ರಾಜ್ಯ ಕೌನ್ಸಿಲರ್ ಸ್ವಪ್ನಾ ಜಾರ್ಜ್ ಗೋಷ್ಠಿಯಲ್ಲಿದ್ದರು.