

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಭಾರಿ-ಧಾರಾಕಾರ ಮಳೆ ಸುರಿದು ಹಲವು ಪ್ರದೇಶಗಳು ಜಲಾವೃತ ಆಗಿರುವುದರಿಂದ ನಗರದ ಕೆಲವು ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆ. 7ರಂದು ರಜೆ ಘೋಷಿಸಲಾಗಿದೆ.
ಮುಂದಿನ 2 ಶನಿವಾರಗಳಂದು ಪೂರ್ಣದಿನ ಕಾರ್ಯ ನಿರ್ವಹಿಸುವ ಮೂಲಕ ಸದರಿ ರಜಾದಿನದ ಕಾರ್ಯವನ್ನು ಸರಿದೂಗಿಸಲು ಆದೇಶದಲ್ಲಿ ತಿಳಿಸಲಾಗಿದೆ.