

ರಾಮದುರ್ಗ: ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವದ ಅಂಗವಾಗಿ ಏ. 30ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತಮಠ ಟ್ರಸ್ಟ್ ಅಧ್ಯ ಪ್ರದಿಪಕುಮಾರ ಪಟ್ಟಣ ಹೇಳಿದರು. ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ಷಟಸ್ಥಲ ಧ್ವಜಾರೋಹಣ ಹಾಗೂ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. 9 ಗಂಟೆಗೆ ಬೆಕ್ ರ್ಯಾಲಿ ಮೂಲಕ ಬಸವೇಶ್ವರ ವತ್ತದಲ್ಲಿರುವ ಅಶ್ವಾರೂಢ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸಿ, ತಹಸೀಲ್ದಾರ್ ಕಚೆೇರಿಯಲ್ಲಿ ಬಸವ ಜಯಂತಿ ಉತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗುತ್ತಿದೆ. ಸಂಜೆ 4 ಗಂಟೆಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮಹಾದೇವಪ್ಪ ಕಲಹಾಳ, ಬಸವರಾಜ ಗಂಗಣ್ಣವರ, ಶಿವಯೋಗಿ ಚಿಕ್ಕೋಡಿ, ಮಹಾಂತೇಶ ಉಮತಾರ, ಸಂಜಯ ಆರಿಬೆಂಚಿ, ಸಂಗಮೇಶ ಉದುಪುಡಿ, ಶ್ರೇಯಸ್ ಜಾಬಶೆಟ್ಟಿ, ಚೆನ್ನಬಸು ಸೊಬರದ, ಬಸವರಾಜ ಕೋಣನ್ನವರ, ಶಶಿಧರ ಮಾಳವಾಡ ಇದ್ದರು.