ಬೈಲಹೊಂಗಲ: ತಾಲೂಕಿನ ನಯಾನಗರ ಗ್ರಾಮದ ಶ್ರೀ ಸುಖದೇವಾನಂದ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಏ. 20ರಂದು ಬೆಳಗ್ಗೆ ಶ್ರೀ ಸುಖದೇವಾನಂದ ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ಅಲಂಕಾರ ಪೂಜೆ, ಅಭಿಷೇಕ, ಸಹಸ್ರ ಮಂತ್ರ ಪಠಣ, ಭಜನೆ, ಮಧ್ಯಾಹ್ನ 12.30ಕ್ಕೆ ಸಾಮೂಹಿಕ ವಿವಾಹ, ಗಣ್ಯರಿಗೆ ಸನ್ಮಾನ, ಧರ್ಮಸಭೆ ನಡೆಯಲಿವೆ. 1 ಗಂಟೆಗೆ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ, ಅನ್ನ ಪ್ರಸಾದವಿದೆ. ರಾತ್ರಿ 10 ಗಂಟೆಗೆ ನಾಟಕ ಪ್ರದರ್ಶನವಾಗಲಿದೆ. ಸಾಂಸತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.