ಮಳವಳ್ಳಿ: ತಾಲೂಕಿನ ಹಲಗೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ನ.19 ರಂದು ಬೆಳಗ್ಗೆ 9ರಿಂದ ಸಂಜೆ 6ಗಂಟೆವರೆಗೆ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕೇಂದ್ರದ ವ್ಯಾಪ್ತಿಯ ಹಲಗೂರು, ಲಿಂಗಪಟ್ಟಣ, ದಳವಾಯಿ ಕೋಡಿಹಳ್ಳಿ, ಟಿ.ಕೆ.ಹಳ್ಳಿ, ಎಚ್.ಬಸಾಪುರ, ಗೊಲ್ಲರಹಳ್ಳಿ, ಕುಂತೂರು, ಸಾಮಂದಿಪುರ, ಸಾಗ್ಯ, ಚಿಲ್ಲಾಪುರ, ಒಬಿ ದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ವಿದ್ಯುತ್ ಅಡಚಣೆಯಾಗಲಿದೆ ಎಂದು ಸೆಸ್ಕ್ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಿತೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.