ತಂಬಾಕು ಬ್ಯಾರನ್ ಕುಸಿದು ನಷ್ಟ

ತಂಬಾಕು ಬ್ಯಾರನ್ ಕುಸಿದು ನಷ್ಟ
Published on

ಹುಣಸೂರು: ವಾರದಿಂದ ಸುರಿಯುತ್ತಿರುವ ಸತತ ಮಳೆಗೆ ರೈತರೊಬ್ಬರ ತಂಬಾಕು ಹದಗೊಳಿಸುವ ಬ್ಯಾರನ್ ಕುಸಿದುಬಿದ್ದಿದೆ.

ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಎಚ್.ಟಿ.ಮಹದೇವ್ ಅವರ ಸಿಂಗಲ್ ಬ್ಯಾರನ್(13*13 ಅಳತೆ) ಮಂಗಳವಾರ ರಾತ್ರಿ ನೆಲಕ್ಕಚ್ಚಿದೆ. ಪಕ್ಕದಲ್ಲೇ ವಾಸದ ಮನೆಯಲ್ಲಿ ರಾತ್ರಿ ಮಲಗಿದ್ದ ವೇಳೆ ಗೋಡೆ ಬಿದ್ದಿದ್ದರೂ ವಾಸದ ಮನೆ ಮೇಲೆ ಬೀಳದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ. ತಂಬಾಕು ಹದಗೊಳಿಸುವ ಸಮಯದಲ್ಲಿ ಬ್ಯಾರನ್ ಮನೆ ಬಿದ್ದಿರುವುದು ರೈತನಿಗೆ ಸಂಕಷ್ಟ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net