ಶೋಷಿತರಿಗೆ ಶಕ್ತಿ ತುಂಬಿದವರು ಅರಸು

20Savadatti2a
Published on

ಸವದತ್ತಿ: ಬಲಿಷ್ಠ ಸ್ವಹಿತಾಸಕ್ತಿವುಳ್ಳ ರಾಜಕಾರಣಿಗಳ ನಡುವೆಯೂ ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ತಂದು ಭೂರಹಿತರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದ ಡಿ. ದೇವರಾಜ ಅರಸು ಕೊಡುಗೆ ಅಪಾರ ಎಂದು ಶಾಸಕ ವಿಶ್ವಾಸ ವೈದ್ಯ ಬಣ್ಣಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು 110ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ, ಆರ್ಥಿಕ ಯೋಜನೆಗಳ ಮೂಲಕ ಸಮಾನತೆ ತರಲು ಶೋಷಿತರಿಗೆ ಶಕ್ತಿ ತುಂಬಿದರು ಎಂದರು. ಶಿಕ ಉಮೇಶ ನರಗುಂದ ಉಪನ್ಯಾಸ ನೀಡಿದರು. ತಾಲೂಕು ಕಲ್ಯಾಣಾಧಿಕಾರಿ ಎಂ.ಎ. ತಹಶೀಲ್ದಾರ್​ ಸ್ವಾಗತಿಸಿದರು. ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾಪಂ ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ, ಪುರಸಭೆ ಅಧ್ಯೆ ಚಿನ್ನವ್ವ ಹುಚ್ಚಣ್ಣವರ, ಎಪಿಎಂಸಿ ಅಧ್ಯ ಚಂದ್ರಶೇಖರ ಪೂಜೇರ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಶಿವಕುಮಾರ ರಾಠೋಡ, ಮುನವಳ್ಳಿ ಪುರಸಭೆ ಮುಖ್ಯಾಧಿಕಾರಿ ಎಂ.ಎಂ. ತಿಮ್ಮಣಿ, ಮಹಾದೇವ ಗುಗ್ಗರನಟ್ಟಿ, ನಿಲಯಪಾಲಕ ಎಸ್​.ಜಿ. ಸಿಂಗಾರಗೊಪ್ಪ, ವಿಸ್ತರಣಾಧಿಕಾರಿ ಶ್ರೀಕಾಂತ ಇಂಗಳಗಿ, ಉಮೇಶ ಅವರಾಧಿ, ಉಮೇಶ ಹಂಚಿನಮನಿ, ಎಂ.ಎ. ಶಬಾಶಖಾನ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net