ತಾಲೂಕಿಗೆ ಇಂಜಿನಿಯರಿಂಗ್ ಕಾಲೇಜು ತರಲು ಪಣ

BJP
ಸಿರಗುಪ್ಪದಲ್ಲಿ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ರೋಡ್ ಶೋ ದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮತಯಾಚಿಸಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಆರ್.ಸಿ.ಪಂಪನಗೌಡ, ಪ್ರಮುಖರಾದ ಬಿ.ಇ.ದೊಡ್ಡಯ್ಯ, ಕುಂಟ್ನಾಳ್ ಮಲ್ಲಿಕಾರ್ಜುಜನಯ್ಯಸ್ವಾಮಿ, ಮಲ್ಲಿಕಾರ್ಜುನ, ಎಂ.ಎಸ್.ಕೊಮಾರೆಪ್ಪ, ಚಾಗಿಸುಬ್ಬಯ್ಯ, ಎಂ.ವೀರೇಶ ಇತರರಿದ್ದರು.
Published on

ಸಿರಗುಪ್ಪ: ನಗರಕ್ಕೆ ಕುಡಿಯುವ ನೀರಿನ ಕೆರೆ, ರಾರಾವಿ ಸೇತುವೆ ನಿರ್ಮಿಸಲಾಗಿದ್ದು, ಬಲಕುಂದಿ-ಮುದೇನೂರು ಬ್ರಿಡ್ಜ್ ಕಂ.ಬ್ಯಾರೇಜ್ ನಿರ್ಮಾಣ ಕಾರ್ಯನಡೆಯುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ ಹೇಳಿದರು.

ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಸೋಮವಾರ ಆಯೋಜಸಿದ್ದ ರೋಡ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿ, ನಗರದ ವಿವಿಧ ವಾರ್ಡ್‌ಗಳಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ.

ಇನ್ನು ಮುಂದಿನ ದಿನಗಳಲ್ಲಿ ತಾಲೂಕಿಗೆ ಇಂಜಿನಿಯರಿಂಗ್ ಕಾಲೇಜು, ಬಿ.ಇಡಿ.ಕಾಲೇಜು, ತುಂಗಭದ್ರಾ ನದಿಗೆ ಸೇತುವೆ ನಿರ್ಮಾಣಕ್ಕೆ ಈಗಾಗಲೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಹಣ ಬಿಡುಗಡೆಯೂ ಆಗಿದ್ದು, ಸೇತುವೆ ನಿರ್ಮಾಣದ ಗುರಿ, ನವೋದಯ, ಸರ್ವೋದಯ ವಸತಿ ಶಾಲೆಗಳ ಸ್ಥಾಪನೆಯ ಗುರಿ ಹೊಂದಲಾಗಿದೆ. ಈ ಚುನಾವಣೆಯಲ್ಲಿ ಮತದಾರರು ಮತ್ತೊಮ್ಮೆ ಬಿಜೆಪಿಗೆ ಮತ ನೀಡಿದರೆ ತಾಲೂಕು ಅಭಿವೃದ್ದಿಯಾಗಲಿದೆ ಎಂದರು.

ಮಾಜಿ ಜಿಪಂ ಸದಸ್ಯ ವಿಶ್ವ ಹಿಂದು ಪರಿಷತ್ ತಾಲೂಕು ಕಾರ್ಯದರ್ಶಿ ಎ.ಜೆ.ಮಂಜುನಾಥ, ಬಿಜೆಪಿ ಕಾನೂನು ಪ್ರಕೋಷ್ಠ ಜಿಲ್ಲಾ ಸಹ ಸಂಚಾಲಕ ಎಂ.ಶಿವಕುಮಾರಸ್ವಾಮಿ, ಪದಾಧಿಕಾರಿಗಳಾದ ಎನ್.ಹನುಮೇಶ ಶೆಟ್ಟಿ, ದ್ಯಾಮನಗೌಡ, ಶಾಂತಯ್ಯಸ್ವಾಮಿ, ನಂದೀಶ, ಇಬ್ರಾಂಪುರ ಮಂಜುನಾಥ, ಮಲ್ಲಯ್ಯಶೆಟ್ಟಿ ಇದ್ದರು. ಪ್ರಮುಖರಾದ ಕೆ.ಕ್ರಿಷ್ಣ, ಎಚ್.ವಿಜಯಕುಮಾರ್, ಡಾ.ಬಸವರಾಜ, ಬಿ.ಈರಣ್ಣ, ರಾಮನಾಯಕ, ಎಂ.ಎಸ್.ವೆಂಕಟಪ್ಪನಾಯಕ, ರಾಮಕೃಷ್ಣ, ಮಲ್ಲಿಕಾರ್ಜುನ, ಎಂ.ವೀರೇಶ, ಮಹದೇವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net