ಆಡಳಿತ ಚುಕ್ಕಾಣಿಗೆ ಜ್ಞಾನಶಕ್ತಿಯೇ ದಾರಿ : ಡಾ.ಶಿವಕುಮಾರ ಅಭಿಮತ |

1101Klb02
ಕಲಬುರಗಿಯಲ್ಲಿ ಜಾಗೃತ ಜನವೇದಿಕೆ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಡಾ.ಶಿವಕುಮಾರ ಉದ್ಘಾಟಿಸಿದರು. ಚಂದ್ರಶೇಖರ ದೊಡ್ಡಮನಿ, ಮಹೇಶ ಕುಲಕರ್ಣಿ, ಮಲ್ಲಿಕಾರ್ಜುನ ಗೌರ, ಬಸವರಾಜ ಹೇರೂರ, ರಾಜಮಹೇಂದ್ರ ಕಿರಣಗಿ ಇತರರಿದ್ದರು.
Published on

ಜಾಗೃತ ಜನವೇದಿಕೆಯಿಂದ ಭೀಮಾ ಕೋರೆಗಾಂವ್ ವಿಚಾರ ಸಂಕಿರಣ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಶೋಷಿತರು, ದಲಿತರು ಹಾಗೂ ದುಡಿಯುವ ವರ್ಗದವರು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಆಡಳಿತದ ಆಯಕಟ್ಟಿನ ಸ್ಥಾನಕ್ಕೆ ಏರದ ಹೊರತು ತಮ್ಮ ಹಿತ ಕಾಯುವಂಥ ನೀತಿ ನಿರೂಪಣೆ ಸುಲಭವಲ್ಲ. ಈ ಅವಕಾಶ ಕೈಗೂಡಬೇಕಾದರೆ e್ಞÁನವೇ ಶಕ್ತಿ ಎಂಬುದನ್ನು ಅರಿಯಬೇಕಿದೆ ಎಂದು ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ ಹೇಳಿದರು.

ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಜಾಗೃತ ಜನವೇದಿಕೆ ರಾಜ್ಯ ಸಮಿತಿ ಭೀಮಾ ಕೋರೆಗಾಂವ್ ೨೦೭ನೇ ಶೌರ್ಯ ದಿನಾಚರಣೆ ನಿಮಿತ್ತ  ಆಯೋಜಿಸಿದ್ದ ಹುತಾತ್ಮರ ಸ್ಮರಣೆ: ನಮ್ಮ ಹೊಣೆ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ ಮತ್ತು ಉದ್ಯಮ ಕ್ಷೇತ್ರವನ್ನು ಕೈಯಲ್ಲಿ ಇಟ್ಟುಕೊಂಡವರು ತಮ್ಮ ಅನುಕೂಲಕ್ಕೆ ತಕ್ಕಂತೆ ನೀತಿ ನಿರೂಪಣೆ ಮಾಡುವಂತೆ ಪ್ರಭಾವ ಬೀರಲು ಶಕ್ತರು. ಇಂತಹ ಶಕ್ತಿ ದಲಿತ ಮತ್ತು ಹಿಂದುಳಿತ ಸಮುದಾಯದ ಜನರಿಗೆ ಬಂದಾಗಲೇ ಅಂಬೇಡ್ಕರ್ ಜಯಂತಿ, ಭೀಮಾ ಕೋರೆಗಾಂವ್ ಶೌರ್ಯ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.

ಶೋಷಿತರು ತಾಳ್ಮೆ ಮತ್ತು ವಿವೇಚನೆಗೆ ಆದ್ಯತೆ ನೀಡುವ ಬದಲು ತP್ಷÀಣ ಉದ್ರೇಕಗೊಳ್ಳುತ್ತಾರೆ. ಆದರೆ e್ಞÁನದ ಶಕ್ತಿ ಮೇಲೆ ನಂಬಿಕೆ ಇಟ್ಟವರು ಯಾವುದಕ್ಕೂ ಉದ್ರೇಕಗೊಳ್ಳದೆ ತಮ್ಮ ಕಾರ್ಯಸಾಧನೆಯತ್ತ ಗಮನ ಕೇಂದ್ರೀಕರಿಸುತ್ತಾರೆ. ಇಂತಹ ಕಾರ್ಯತತ್ಪರತೆ ಬದ್ಧತೆಗೆ ಶೋಷಿತರು ಜನರು ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.

ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಚಂದ್ರಶೇಖರ ದೊಡ್ಡಮನಿ ಮಾತನಾಡಿದರು. ವೇದಿಕೆ ಅಧ್ಯP್ಷÀ ಮಹೇಶ ಕುಲಕರ್ಣಿ ಅಧ್ಯP್ಷÀತೆ ವಹಿಸಿದ್ದರು. ಪ್ರಗತಿಪರ ಚಿಂತಕ ಬಸವರಾಜ ಹೇರೂರ, ಪಬ್ಲಿಕ್ ಪ್ರಾಸಿಕ್ಯೂಟರ್ ರಾಜಮಹೇಂದ್ರ ಕಿರಣಗಿ, ಇಂಜಿನಿಯರ್ ನಾಗಮೂರ್ತಿ ಶೀಲವಂತ, ಕಮಲಾಪುರ ಪಪಂ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ಉಪನ್ಯಾಸಕ ಡಾ.ವಿಜಯಕುಮಾರ ಸಾಲಿಮನಿ, ನಿವೃತ್ತ ಡಿವೈಎಸ್‌ಪಿ ವಿಜಯಕುಮಾರ ಹೊಸ್ಮನಿ, ಬಸವರಾಜ ಶಿವಕೇರಿ, ಯಶವಂತ ಶಿಂಧೆ, ಹಣಮಂತ ಬೋಧನಕರ್, ಡಾ.ಕೆ.ಎಸ್. ಬಂಧು ಸಿz್ದೆÃಶ್ವರ, ದಯಾನಂದ ದೊಡ್ಮನಿ, ಸುರೇಶ ಬಡಿಗೇರ, ಡಾ.ವಿಜಯಕುಮಾರ ಹೆಬ್ಬಾಳಕರ್ ಇತರರಿದ್ದರು.

ವೇದಿಕೆ ಖಜಾಂಚಿ ಎ.ಬಿ. ಪಟೇಲï ಸೊನ್ನ ಸ್ವಾಗತಿಸಿದರು. ಉಪಾಧ್ಯP್ಷÀ ಮಲ್ಲಿಕಾರ್ಜುನ ಗೌರ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ರಾಜಶೇಖರ ಹಣಕುಣಿ ನಿರೂಪಣೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ಅಂಬಾಜಿ ಮೇಟಿ ವಂದಿಸಿದರು. ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಶ್ರೀಧರ ಅವರು ಕ್ರಾಂತಿಗೀತೆ ಪ್ರಸ್ತುತಪಡಿಸಿದರು.

ಕೋಟ್

ಯಹೂದಿಗಳು e್ಞÁನಶಕ್ತಿಯಿಂದ ಅಮೆರಿಕದ ಶೇ.೫೦ ಉದ್ಯಮದ ಮೇಲೆ ಹಿಡಿತ ಸಾಧಿಸಿರುವ ಕಾರಣಕ್ಕೆ ಪ್ಯಾಲಿಸ್ತೀನ್ ಮೇಲೆ ಇಸ್ರೇಲ್ ಎಷ್ಟೇ ದೌರ್ಜನ್ಯ ನಡೆಸಿದರೂ ಜಗತ್ತಿನ ದೊಡ್ಡಣ್ಣ ತುಟಿ ಬಿಚ್ಚುತ್ತಿಲ್ಲ. ಅಮೆರಿಕದ ಉದ್ಯಮ ಕ್ಷೇತ್ರದ ಮೇಲೆ ಇಸ್ರೇಲï ಸಾಧಿಸಿರುವ ಪ್ರಾಬಲ್ಯದ ಎದುರು ಪ್ರತಿಕ್ರಿಯಿಸದೆ ತಣ್ಣಗಿರುವುದನ್ನು ನೋಡಿದರೆ e್ಞÁನಶಕ್ತಿ ಮುಂದೆ ಎಂಥವರೂ ಮುದುಡಿಕೊಳ್ಳುತ್ತಾರೆ ಎಂಬುದು ಸಾಬೀತಾಗುತ್ತದೆ.

| ಡಾ.ಶಿವಕುಮಾರ

ನಿರ್ದೇಶಕ, ಅಕ್ಕ ಐಎಎಸ್ ಅಕಾಡೆಮಿ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net