ಭುವನೇಶ್ವರಿಗೆ ಪೂಜೆ ಸಲ್ಲಿಸಿ ಸ್ವಾಗತ

4KNK1
ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮಕ್ಕೆ ಆಗಮಿಸಿದ ರಥಯಾತ್ರೆಯನ್ನು ತಹಸೀಲ್ದಾರ ವಿಶ್ವನಾಥ ಮುರುಡಿ ಸ್ವಾಗತಿಸಿದರು. ಗ್ರೇಡ್-2 ತಹಸೀಲ್ದಾರ್ ವಿ.ಎಚ್ ಹೊರಪೇಟಿ, ಶಿರಸ್ತೇದಾರ ಶರಣಪ್ಪ, ಸಿಡಿಪಿಒ ವಿರುಪಾಕ್ಷಿ ಇತರರಿದ್ದರು.
Published on

ಕನಕಗಿರಿ: ತಾಲೂಕಿನ ಗಡಿಭಾಗ ಹುಲಿಹೈದರ್ ಗ್ರಾಮಕ್ಕೆ ಸೋಮವಾರ ಆಗಮಿಸಿದ ಕನ್ನಡ ರಥಯಾತ್ರೆಯನ್ನು ಭುವನೇಶ್ವರಿ ದೇವಿಗೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಪೂಜೆ ಸಲ್ಲಿಸಿ ಸ್ವಾಗತಿಸಿದರು.

ನಂತರ ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡ 50 ವಷರ್ಗಳ ಸವಿನೆನಪಿಗಾಗಿ ರಾಜ್ಯ ಸರ್ಕಾರ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿ ಹಳ್ಳಿಗೂ ತಲುಪಿಸುವ ಮಹಾನ್ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮೆರವಣಿಗೆಗೆ ಕಲಾತಂಡಗಳ ಮೆರಗು

ಕನ್ನಡ ರಥಯಾತ್ರೆ ಮೆರವಣಿಗೆ ಕಲಾ ತಂಡಗಳ ಮೂಲಕ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗಿತು. ಕುಂಭ, ವಿಶೇಷವಾಗಿ 10ಕ್ಕೂ ಹೆಚ್ಚು ಎತ್ತಿನ ಬಂಡಿಗಳಲ್ಲಿ ಜಾನಪದ ಕಲಾ ತಂಡಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡ ಪ್ರೇಮಿಗಳು ಕನ್ನಡ ಧ್ವಜ ಹಿಡಿದು ವಿವಿಧ ಹೋರಾಟಗಾರರ ವೇಷಭೂಷಣ ಗಮನಸೆಳೆದವು.

  • ತಾ.ಪಂ ಇಒ ಚಂದ್ರಶೇಖರ್ ಕಂದಕೂರ್, ಗ್ರೇಡ್2 ತಹಸೀಲ್ದಾರ್ ವಿ.ಎಚ್ ಹೊರಪೇಟಿ, ಶಿರಸ್ತೇದಾರ ಶರಣಪ್ಪ, ಸಿಡಿಪಿಒ ವಿರುಪಾಕ್ಷಿ, ಪ್ರಮುಖರಾದ ರಮೇಶ ನಾಯಕ, ಕಂದಾಯ ಇಲಾಖೆಯ ಸಿಬ್ಬಂದಿ, ಗ್ರಾಪಂ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net