ತಾಯಿ ಭುವನೇಶ್ವರಿ ಮೆರವಣಿಗೆ ಅದ್ದೂರಿ

MERAVANIGE
ಕಾರಟಗಿಯ ವಿಶೇಷ ಎಪಿಎಂಸಿಯಲ್ಲಿ ಜಾಗೃತ ಯುವಕ ಸಂಘ ಹಮ್ಮಿಕೊಂಡಿದ್ದ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಗೆ ಪ್ರೊ.ಸಿದ್ದು ಯಾಪಲಪರ್ವಿ ಶನಿವಾರ ಚಾಲನೆ ನೀಡಿದರು. ಶಿರಸ್ತೇದಾರ್ ಉಮಾಮಹೇಶ್ವರ, ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ, ಸಂಘದ ಗೌರವಾಧ್ಯಕ್ಷ ಪ್ರಹ್ಲಾದ್ ಜೋಷಿ, ಅಧ್ಯಕ್ಷ ತಾಯಪ್ಪ ಕೋಟ್ಯಾಳ, ಉಪಾಧ್ಯಕ್ಷರಾದ ಅಯ್ಯಪ್ಪ ಉಪ್ಪಾರ್, ಬಸವರಾಜ ಶೆಟ್ಟರ್, ಕಾರ್ಯದರ್ಶಿ ಅನೀಲ್ ಪಾಟೀಲ್, ಸಹಕಾರ್ಯದರ್ಶಿ ಶಂಕ್ರಪ್ಪ, ಪದಾಧಿಕಾರಿಗಳಾದ ರಾಜು ಸಿರಿಗೇರಿ, ರಮೇಶ ಕೋಟ್ಯಾಳ, ಶರಣಪ್ಪ ಕಾಯಿಗಡ್ಡಿ, ವೀರೇಶ ಗದ್ದಿ ಇತರರಿದ್ದರು.
Published on

ಕಾರಟಗಿ: ಇಲ್ಲಿನ ಜಾಗೃತ ಯುವಕ ಸಂಘಟನೆ ಅನೇಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿದೆ ಎಂದು ಪ್ರೊ.ಸಿದ್ದು ಯಾಪಲಪರ್ವಿ ಹೇಳಿದರು.

ಪಟ್ಟಣದ ವಿಶೇಷ ಎಪಿಎಂಸಿ ಆವರಣದಲ್ಲಿ ಜಾಗೃತ ಯುವಕ ಸಂಘ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ತಾಯಿ ಭುವನೇಶ್ವರಿ ಭಾವಚಿತ್ರ ಅದ್ದೂರಿ ಮೆರವಣಿಗೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಕಾರಟಗಿ ಹಲವು ದಶಕಗಳಿಂದ ವ್ಯಾಪಾರ-ವಹಿವಾಟಿನಲ್ಲಿ ತನ್ನ ಹಿರಿಮೆಯನ್ನು ಕಾಪಾಡಿಕೊಂಡು ಬಂದಿದೆ. ತಾಲೂಕಾದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಮೆರಗು ಬಂದಿದೆ. ಅದಕ್ಕೆ ಮೂಲ ಬೇರು ಜಾಗೃತ ಯುವಕ ಸಂಘದ ಹಿರಿಯ ಪದಾಧಿಕಾರಿಗಳು. ಕ್ಷೇತ್ರದ ಶಾಸಕರಾದ ಶಿವರಾಜ ತಂಗಡಗಿಯವರೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವುದರಿಂದ ಪಟ್ಟಣಕ್ಕೆ ಹೆಚ್ಚಿನ ರೀತಿಯಲ್ಲಿ ಸಾಂಸ್ಕೃತಿಕ ಪ್ರಾಶಸ್ತ್ಯ ದೊರಿಕಿಸಿಕೊಡಲಿ ಎಂದು ತಿಳಿಸಿದರು.

ಮೆರವಣಿಗೆಯಲ್ಲಿ 100ಮೀಟರ್ ಉದ್ದದ ಕನ್ನಡ ಬಾವುಟ ಜನಮನಸೆಳೆಯಿತು. ಚಿರ್ಚನಗುಡ್ಡ ತಾಂಡಾದ ಬಾಲಕಿಯರ ಲಂಬಾಣಿ ನೃತ್ಯ, ವಿವಿಧ ಶಾಲೆಗಳ ವಿದ್ಯಾರ್ಥಿಗಳ ಮಹನೀಯರ ಛದ್ಮವೇಷ, ಕನ್ನಡ ಮತ್ತು ಸಂಸ್ಕೃತ ಇಲಾಖೆ ನೇತೃತ್ವದಲ್ಲಿ ಚಿತ್ರದುರ್ಗದ ಕಲಾ ಬಳಗಗಳು, ಶ್ರೀಶರಣಬಸವೇಶ್ವರ ವಿದ್ಯಾ ಸಂಸ್ಥೆ, ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ರಾಮನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೆಂಟ್ರಲ್ ಪಬ್ಲಿಕ್ ಸ್ಕೂಲ್, ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಇತರ ಶಾಲೆಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪಟ್ಟಣದ ವಿಶೇಷ ಎಪಿಎಂಸಿಯಿಂದ ಆರಂಭಗೊಂಡ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಆರ್.ಜಿ.ಹೆದ್ದಾರಿ, ಹಳೇ ಬಸ್ ನಿಲ್ದಾಣ, ಸಾಲೋಣಿ ಕ್ರಾಸ್, ಕನಕದಾಸ ವೃತ್ತ, ನವಲಿ ರಸ್ತೆ ಹಾಗೂ ದಲಾಲಿ ಬಜಾರ್ ಮೂಲಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿನ ಶ್ರೀಸಿದ್ದೇಶ್ವರ ರಂಗ ಮಂದಿರ ತಲುಪಿತು.
ಈ ವೇಳೆ ಪುರಸಭೆ ಸದಸ್ಯರಾದ ಕೆ.ಎಚ್. ಸಂಗನಗೌಡ, ರಾಜು ಸಿರಿಗೇರಿ, ದೊಡ್ಡಬಸಪ್ಪ ಬೂದಿ, ಪ್ರಮುಖರಾದ ಬಿ.ಶಿವರೆಡ್ಡಿನಾಯಕ, ಶರಣಪ್ಪ ಗದ್ದಿ, ಬಸವರಾಜ ಪಗಡದಿನ್ನಿ, ಶರಣಪ್ಪ ಕಾಯಿಗಡ್ಡಿ, ಪ್ರಭುರಾಜ್ ಬೂದಿ, ಮಹೇಶ ಕಂದಗಲ್, ಶುಕ್ರ್ ಅಹ್ಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net