

ತುಮಕೂರು: ಜಿಲ್ಲೆಯ ಗಡಿ ಭಾಗದಲ್ಲಿರುವ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿಯಲ್ಲಿ ಸತತ ಮಳೆಯಿಂದ ರಸ್ತೆಗಳೆಲ್ಲಾ ಜಲಾವೃತವಾಗಿದ್ದು ಜನರ ಸಂಪರ್ಕವೇ ಕಡಿತವಾಗಿದೆ.
ಹಿರಿಯೂರು ತಾಲೂಕು ವಾಣಿವಿಲಾಸ ಸಾಗರದ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಬೋರನಕಣಿವೆ ಜಲಾಶಯದಲ್ಲಿ ನೀರಿನ ಪ್ರಮಾಣ ದಾಖಲೆಯ ಮಟ್ಟಕ್ಕೇರಿರುವುದು ಗ್ರಾಮಗಳಲ್ಲಿ ನೀರು ಹೆಚ್ಚಾಗಲು ಕಾರಣವಾಗಿದೆ.
ಪ್ರಸ್ತುತ ಹುಳಿಯಾರು ಹೋಬಳಿಯಗೌಡಗೆರೆ, ಕುರಿಹಟ್ಟಿ, ಲಿಂಗಪ್ಪನಪಾಳ್ಯ, ಕೆ.ಸಿ.ಪಾಳ್ಯ ಗ್ರಾಮಗಳಿಂದ ಶಿರಾ-ಹುಳಿಯಾರು ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗೌಡಗೆರೆ ರಸ್ತೆಯಲ್ಲಿ ಮೊಣಕಾಲುದ್ದ ನೀರು ರಭಸವಾಗಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಈ ಭಾಗದ ಜನರು 8ಕಿಮೀ ಸುತ್ತಿಕೊಂಡು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸಬೇಕಿದೆ.