ಮಾಧುಸ್ವಾಮಿ ನಿಜ ಹೇಳಿದ್ದಾನೆ ಎಂದ ಟಿಬಿಜೆ

tb jayachandra
Published on

ತುಮಕೂರು: ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡುತ್ತಿz್ದೆÃವೆ ಎಂಬ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ಸತ್ಯವಾಗಿದ್ದು ಅವರನ್ನು ಅಭಿನಂದಿಸಿz್ದÉÃನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಾಲೆಳೆದರು.

ಇಂದು ಸುದ್ದಿಗಾರರ ಜತೆ ಮಾತನಾಡಿದ ಟಿಬಿಜೆ, ನಾನೂ, ಮಾಧುಸ್ವಾಮಿ ಒಂದೇ ತಾಲ್ಲೂಕಿನವರು, ಬಹಳ ಸ್ನೇಹಿತರು. ಈಗ ನಮ್ಮ ರಾಜಕೀಯದಲ್ಲಿ ಭಿನ್ನಭಿಪ್ರಾಯ ಇರಬಹುದಷ್ಟೇ. ಮಾಧುಸ್ವಾಮಿ ಸತ್ಯ ಹೇಳಿz್ದÁನೆ, ನನ್ನ ಕಂಪ್ಲಿಮೆAಟ್ಸ್ ಅವನಿಗಿದೆ ಎಂದು ಏಕವಚನದಲ್ಲಿಯೇ ಹೇಳಿದರು.

ಸಾಂವಿಧಾನತ್ಮಕವಾಗಿ ನಡೆಯಬೇಕಿರುವ ಸರ್ಕಾರ ನಡೆಯುತ್ತಿಲ್ಲ ಎಂದು ಮಾಧುಸ್ವಾಮಿ ಸತ್ಯ ಹೇಳಿರುವುದಕ್ಕೆ ನಂದು ಕಂಪ್ಲಿಮೆAಟ್ ಇದೆ, ಇದೇ ಮೊದಲ ಸಲ ನಾನು ಅವರಿಗೆ ಕಂಪ್ಲಿಮೆAಟ್ ಮಾಡ್ತಿರೋದು ಎಂದರು.

ರಾಜಕೀಯದಲ್ಲಿ ನವೆಂಬರ್, ಡಿಸೆಂಬರ್‌ನಲ್ಲಿ ಬದಲಾವಣೆಗಳು ಆಗ್ತಾವೆ, ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವವರಿದ್ದಾರೆ, ಶಾಸಕ ಗುಬ್ಬಿ ಎಸ್.ಆರ್.ಶ್ರೀನಿವಾಸ್ ಕೂಡ ಜೆಡಿಎಸ್‌ನಲ್ಲಿ ಇರುವುದಿಲ್ಲ ಎಂದಿದ್ದಾರೆ, ಕಾಂಗ್ರೆಸ್‌ಗೆ ಬರ್ತಾರೊ, ಬಿಜೆಪಿಗೆ ಹೋಗ್ತರೊ ನೋಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net