

ಉಳ್ಳಾಲ: ಗ್ರಾಮೀಣ ಭಾಗದ ಪ್ರತಿಭೆಗಳಿಂದಲೇ ಶೀರ್ಷಿಕೆ ಗೀತೆ ರಚನೆಗೊಂಡಿದೆ. ಯುವ ಪ್ರತಿಭೆಗಳು ಸಂಘದಲ್ಲೇ ಇರುವುದು ಇನ್ನಷ್ಟು ಹೆಮ್ಮೆಯ ವಿಚಾರ. ಈ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳಗಲು ಸರ್ವರ ಪ್ರೋತ್ಸಾಹ ಅಗತ್ಯ ಎಂದು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ವಿಜೇತ್ ಪಜೀರ್ ಅಭಿಪ್ರಾಯಪಟ್ಟರು.
ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ ಆಶ್ರಯದಲ್ಲಿ ಕೊಣಾಜೆ ಮಂಗಳೂರು ವಿಶ್ವವಿದ್ಯಾಲಯದ ಒಳಾಂಗಣ ಸಭಾಂಗಣದಲ್ಲಿ ಅ.19ರಂದು ನಡೆಯಲಿರುವ ಯುವವಾಹಿನಿ ಅಂತರ್ ಘಟಕ ಷಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದ ಪ್ರಯುಕ್ತ ಗುರುವಾರ ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಶೀರ್ಷಿಕೆ ಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿತ್ರನಟ ದೀಕ್ಷಿತ್ ಕೆ.ಅಂಡಿಂಜೆ ಶೀರ್ಷಿಕೆ ಗೀತೆ ಬಿಡುಗಡೆಗೊಳಿಸಿದರು. ಗೀತೆ ಹಾಡಿದ ರಕ್ಷಿತ್ ಕೆ.ಅಸೈಗೋಳಿ, ಶ್ರೀರಕ್ಷಾ ಎಸ್.ಎಚ್. ಪೂಜಾರಿ ಮತ್ತು ಸಾಂಸ್ಕೃತಿಕ ನಿರ್ದೇಶಕಿ ಪೂರ್ಣಿಮಾ ಪಜೀರ್ ಅವರನ್ನು ಅಭಿನಂದಿಸಲಾಯಿತು.
ಯುವವಾಹಿನಿ ಗ್ರಾಮಚಾವಡಿ-ಕೊಣಾಜೆ ಘಟಕದ ಅಧ್ಯಕ್ಷ ಬಾಬು ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಹರೀಶ್ ಪೂಜಾರಿ ಕೊಣಾಜೆ, ಒಂದನೇ ಉಪಾಧ್ಯಕ್ಷ ಮುರಳೀಧರ್ ಕೊಣಾಜೆ, ಕೋಶಾಧಿಕಾರಿ ಅಜಿತ್ ತಾರಿಪ್ಪಾಡಿ ಉಪಸ್ಥಿತರಿದ್ದರು.
ಯುವವಾಹಿನಿ ಕಾರ್ಯದರ್ಶಿ ಮಿಥುನ್ ಪಜೀರ್ ಸ್ವಾಗತಿಸಿ. ಕ್ರೀಡಾ ನಿರ್ದೇಶಕಿ ಸುರೇಖಾ ಎಚ್.ಪೂಜಾರಿ ವಂದಿಸಿ, ದ್ವಿತೀಯ ಉಪಾಧ್ಯಕ್ಷ ಅಜಿತ್ ಪೂಜಾರಿ ನಿರೂಪಿಸಿದರು.