ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ

ಟೇಕ್ವಾಂಡೋ
ರಾಜ್ಯ ಜೂನಿಯರ್ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಯೋಧಾ ಟೇಕ್ವಾಂಡೋ ಅಕಾಡೆಮಿ ಸದಸ್ಯರು.
Published on

ಕಾಸರಗೋಡು: ಕೋಯಿಕ್ಕೋಡಿನ ವಿ.ಕೆ.ಮೆನನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 26ನೇ ರಾಜ್ಯ ಜೂನಿಯರ್ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಕಾಸರಗೋಡಿನ ಯೋಧಾ ಟೇಕ್ವಾಂಡೋ ಅಕಾಡೆಮಿ ಪ್ರಶಸ್ತಿ ಗೆದ್ದುಕೊಂಡಿದೆ.

2 ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಪದಕಗಳನ್ನು ಗೆದ್ದು ತಂಡ ಕಾಸರಗೋಡು ಜಿಲ್ಲೆಗೆ ಸಮಗ್ರ ಚಾಂಪಿಯನ್‌ಷಿಪ್ ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

52 ಕೆ.ಜಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಕೆ.ಅನುಷಾ ಮತ್ತು 63 ಕೆ.ಜಿ ವಿಭಾಗದಲ್ಲಿ ಎ.ಎಂ.ಫಾತಿಮಾ, ಆಗಸ್ಟ್ 17ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ, ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ. ಚೈತ್ರಲಕ್ಷ್ಮೀ ಸಿ, ಅದ್ವೈತ್ ದಿನು, ಅಭಿನವ್ ಟಿ, ಶ್ರೀನಿಧಿ ಎಂ. ಬೆಳ್ಳಿ ಪದಕ ಪಡೆದರೆ, ಹರಿಕೃಷ್ಣ ಆರ್, ಹನಿ ಎಂ.ಎ ಮತ್ತು ಮಂಜಿಮಾ ಮಣಿಕಂಠನ್ ಕಂಚಿನ ಪದಕ ಪಡೆದರು.

ಯೋಧಾ ಟೆಕ್ವಾಂಡೋ ಅಕಾಡೆಮಿ ಮಾಸ್ಟರ್ ಜಯನ್ ಪೊಯಿನಾಚಿ, ಪ್ರಿಯೇಶ್ ಆರ್, ಸುಜಿತ್ ಕೆ, ಮನೋಜ್ ಕುಮಾರ್ ಕೆ ಮತ್ತು ಶರಣ್ಯ ಕೆ. ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net