

ರಟ್ಟಿಹಳ್ಳಿ: ಪತಿ ಮೃತಪಟ್ಟ ವಿಚಾರದಿಂದ ನೊಂದುಕೊಂಡಿದ್ದ ಪತ್ನಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯಡಗೋಡ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಪವಿತ್ರಾ ಪುಟ್ಟರಾಜ ಪುಟ್ಟಪ್ಪಗೌಡ್ರ (24) ಮೃತ ಮಹಿಳೆ.
ಇವಳನ್ನು 1 ವರ್ಷದ ಹಿಂದೆ ತಾಲೂಕಿನ ಚೌಡನಾಯಕನಹಳ್ಳಿಯ ಪುಟ್ಟರಾಜು ಎಂಬುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಆತ 2 ತಿಂಗಳ ಹಿಂದೆ ಮೃತಪಟ್ಟಿದ್ದ. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಪವಿತ್ರಾ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ಕುರಿತು ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.