

ಕನಕಪುರ : ಆಪರೇಷನ್ ಸಿಂಧೂರ್‌ದ ಯಶಸ್ವಿ ಹಿನ್ನೆಲೆಯಲ್ಲಿ ತಾಲೂಕು ಸಮಾನ ನಾಗರಿಕ ವೇದಿಕೆಯಿಂದ ನಗರದಲ್ಲಿ ಗುರುವಾರ ತಿರಂಗಾ ಯಾತ್ರೆ ನಡೆಸಲಾಯಿತು.
ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದಿಂದ ಎಂ.ಜಿ.ರಸ್ತೆ ಮೂಲಕ ಸಿ.ಬಿ ಸರ್ಕಲ್‌ವರೆಗೆ ಯಾತ್ರೆ ಸಾಗಿತು.
ಜೆಡಿಎಸ್, ಬಿಜೆಪಿ ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಹೆಜ್ಜೆಹಾಕಿದರು.
ಚನ್ನಬಸಪ್ಪ ವೃತ್ತದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ಪಾಕಿಸ್ತಾನದ ಭಯೋತ್ಪಾದಕರು, ದೇಶದ ಅಮಾಯಕ ಪ್ರಜೆಗಳ ಮೇಲೆ ದಾಳಿ ನಡೆಸಿ, ಪ್ರಾಣ ಹರಣ ಮಾಡಿದ್ದರು. ಇಂತಹ ಕಷ್ಟದ ಸಂದರ್ಭದಲ್ಲಿ ರಾಷ್ಟ್ರದ ರಕ್ಷಣೆಗೆ ನಿಂತವರು ಸೈನಿಕರು. ಅವರಿಗೆ ಗೌರವ ಸಲ್ಲಿಸುವ ಮೂಲಕ ಅವರ ಆತ್ಮಸ್ಥೈರ್ಯ ಹೆಚ್ಚಿಸಲು ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ಅಧ್ಯಕ್ಷ ಕೊತ್ತನೂರು ಕುಮಾರ್, ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು, ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಗನ್ನಾಥ್, ಬಿಜೆಪಿ ತಾಲೂಕು ಕಾರ್ಯದರ್ಶಿ ಅಶ್ವತ್ಥ ನಾರಾಯಣ್, ಮುಖಂಡರಾದ ಮಮತಾ, ಶ್ರೀವಲ್ಲಿ, ನಗರಾಧ್ಯಕ್ಷ ಕೆ.ಮಂಜು, ಶಿವಮುತ್ತು, ಆಡನಕುಪ್ಪೆ ಪಾಲಾಕ್ಷ, ಏರಂಗೆರೆ ಶಿವಶಂಕರ್, ರಾಂಪುರ ಕೆಂಪರಾಜು, ಮುಖಂಡರಾದ ಬಿ.ಟಿ.ನಾಗರಾಜ್, ಅನುಕುಮಾರ್, ಭರತ್, ಸ್ಟೂಡಿಯೋ ಚಂದ್ರು ಇದ್ದರು.