

ತುಮಕೂರು: ಶುಕ್ರವಾರ ತಿಪಟೂರು ಬಂದ್‌ಗೆ ಹಿಂದುಪರ ಸಂಘಟನೆಗಳು ಕರೆನೀಡಿವೆ. ಅಂದು ಬಂದ್‌ಗೆ ಸಾರ್ವಜನಿಕರು ಸಹಕರಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ನಿರಂತರವಾಗಿ ಹಿಂದು ಕಾರ್ಯಕರ್ತರ ಹತ್ಯೆಗಳು ನಡೆಯುತ್ತಿರುವುದನ್ನು ಖಂಡಿಸಿ ಹಾಗೂ ಜಿಹಾದಿಗಳಿಗೆ ಮರಣದಂಡಣೆ ಶಿಕ್ಷೆ ನೀಡುವಂತೆ ಆಗ್ರಹಿಸಿ ಹಿಂದು ಹಿತರಕ್ಷಣಾ ಸಮಿತಿ ಹಾಗೂ ಬಜರಂಗದಳ ಸೇರಿದಂತೆ ಹಿಂದುಪರ ಸಂಘಟನೆಗಳಿಂದ ಜುಲೈ 29 ರಂದು ಬಂದ್‌ಗೆ ಕರೆಕೊಟ್ಟಿವೆ. ಸಾರ್ವಜನಿಕರು ಬಂದ್‌ಗೆ ಸಹಕರಿಸಿ, ಯಶಸ್ವಿಗೊಳಿಸಬೇಕೆಂದು ಹಿಂದೂ ಹಿತರಕ್ಷಣಾ ಸಮಿತಿ, ಬಜರಂಗದಳ ವಿನಂತಿಸಿವೆ.
ಪ್ರವೀಣ್ ಹತ್ಯೆ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ನಡೆದಿದ್ದು ಈ ಹಿನ್ನೆಲೆಯಲ್ಲಿ ತಿಪಟೂರು ಬಂದ್‌ಗೆ ಹಿಂದು ಪರ ಸಂಘಟನೆಗಳು ಮುಂದಾಗಿವೆ.