ಜೇವರ್ಗಿಯಲ್ಲಿ ಟಿಪ್ಪು ವಿರುದ್ಧ ಘೋಷಣೆ: ಐವರ ವಿರುದ್ಧ ಕೇಸ್​

Tippu
Published on

ಕಲಬುರಗಿ: ಟಿಪ್ಪು ಸುಲ್ತಾನ್ ಕುರಿತು ಜೇವರ್ಗಿ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ವಿವಾದಾತ್ಮಕ ಘೋಷಣೆ ಕೂಗಿದ ಆರೋಪದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ಆಧರಿಸಿ ಪಟ್ಟಣದ ನಿವಾಸಿಗಳಾದ ಸಚಿನ್ ಬಾಲದಂಡಪ್ಪ (೨೪), ಭೀಮಾಶಂಕರ ಪ್ರಕಾಶ (೨೪), ಶಿವಕುಮಾರ ದೇವಿಂದ್ರಪ್ಪ (೨೬), ಸುನೀಲ ಮೌನೇಶ (೨೬) ಹಾಗೂ ಸಿದ್ದು ಮಲ್ಲಿಕಾರ್ಜುನ (೨೦) ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ ಮುಚ್ಚಳಿಕೆ ಪತ್ರ ಬರೆಸಿ, ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಟ್ಟಣದ ತಳವಾರ ಓಣಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಸೆ.೨೦ರಂದು ಜರುಗಿತ್ತು. ಮೆರವಣಿಗೆ ವೇಳೆ ಐವರು ಆರೋಪಿಗಳು ಟಿಪ್ಪು ಸುಲ್ತಾನ್ ಬಗ್ಗೆ ಆಕ್ಷೇಪಾರ್ಹ ಘೋಷಣೆ ಕೂಗಿದ್ದಾರೆ ಎಂಬ ವಿಡಿಯೋ ಹರಿದಾಡಿತ್ತು. ವಿಡಿಯೋ ಆಧರಿಸಿ, ದೂರು ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net