ಪಂಚಗಂಗಾವಳಿ ಹೊಳೆಗೆ ಟಿಪ್ಪರ್ ಪಲ್ಟಿ

tipper
Published on

ಕುಂದಾಪುರ: ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ರಿಂಗ್‌ರೋಡ್ ಕಾಮಗಾರಿಗಾಗಿ ಖಾರ್ವಿಕೇರಿ ಪ್ರದೇಶದಲ್ಲಿ ಶಿಲೆಗಲ್ಲುಗಳನ್ನು ಅನ್‌ಲೋಡ್ ಮಾಡುತ್ತಿದ್ದ ವೇಳೆ ಪಂಚಗಂಗಾವಳಿ ಹೊಳೆಗೆ ಬುಧವಾರ ಬೆಳಗ್ಗೆ ಟಿಪ್ಪರ್ ಮಗುಚಿ ಬಿದ್ದಿದೆ. ಬದಿಯ ಮಣ್ಣು ಕುಸಿದಿದ್ದರಿಂದ ಅಪಘಾತ ನಡೆದಿದ್ದು, ತಕ್ಷಣ ಸಮೀಪದಲ್ಲೇ ಇದ್ದ ಸ್ಥಳೀಯರು ಟಿಪ್ಪರ್ ಒಳಗೆ ನೀರಿನಲ್ಲಿದ್ದ ಚಾಲಕನನ್ನು ರಕ್ಷಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಟಾಚಿ ಸಹಾಯದಿಂದ ಟಿಪ್ಪರ್ ಮೇಲಕ್ಕೆತ್ತಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net