ಉಸುಕಿನ ಟಿಪ್ಪರ್ ಡಿಕ್ಕಿ ಹೊಡೆದು ಸವಾರ ಸಾವು

Bike Accident_1
Published on


ಕಲಬುರಗಿ ತಾಲೂಕಿನ ಫರಹತಾಬಾದ  ಸಮೀಪದ ಹೆದ್ದಾರಿಯಲ್ಲಿರುವ ಕೆಇಬಿ ಸ್ಟೇಷನ್ ಹತ್ತಿರದಲ್ಲಿ ಬೈಕ್‌ಗೆ ಹಿಂದಿನಿAದ ವೇಗವಾಗಿ ಬಂದ ಉಸುಕು  ಸಾಗಿಸುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬಾಬುರಾವ ಮೇಲಿನಕೇರಿ ಎಂಬುವರೇ ಮೃತಪಟ್ಟವರು. ತಾಡತೆಗನೂರ ಗ್ರಾಮದ ನಿವಾಸಿಯಾಗಿದ್ದರು.
ಕಲಬುರಗಿ ಕಡೆಗೆ ಬೈಕ್ ಹೋಗುತ್ತಿದ್ದರು. ಈ ವೇಳೆಯಲ್ಲಿ ಜೇವರ್ಗಿ  ಕಡೆಯಿಂದ ಕಲಬುರಗಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ವೇಗವಾಗಿ ಬಂದು  ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸಂಚಾರ ಠಾಣೆ-೧ರಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net