ಟಿಪ್ಪರ್ - ಕಾರು ನಡುವೆ ಅಪಘಾತ ಮೂವರ ಸಾವು

9 KKP 03 (2)
Published on

ಕನಕಪುರ: ಸಂಗಮ ರಸ್ತೆಯ ಹುಲಿಬೆಲೆ ಬಾರೆಯ ಕರಿರಾಯರದೊಡ್ಡಿ ಬಳಿ ಟಿಪ್ಪರ್​ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೆಂಗಳೂರಿನ ಬನಶಂಕರಿಯ ಸುಮಾರು 25-28 ವರ್ಷದೊಳಗಿನ ರಾಮಸ್ವಾಮಿ, ಮಂಜುನಾಥ್​, ಸತೀಶ್​ (35) ಮೃತರು.

ರಿಯಲ್​ ಎಸ್ಟೇಟ್​ ಉದ್ಯಮಕ್ಕೆ ಬೇಕಾದ ಪೂರಕ ದಾಖಲೆಗಳನ್ನು ಒದಗಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಈ ಮೂವರು ಸಂಗಮಕ್ಕೆ ತೆರಳಿ ವಾಪಾಸಾಗಾಗುವ ವೇಳೆ, ಶನಿವಾರ ಸಂಜೆ 6.30 ಸಮಯದಲ್ಲಿ ಅಪಘಾತ ಸಂಭವಿಸಿದೆ, ಕನಕಪುರ ಕಡೆಯಿಂದ ಜಲ್ಲಿ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್​ ಹಾಗೂ ಸಂಗಮದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದೆ.

ಗ್ರಾಮಾಂತರ ಸಬ್​ಇನ್​ಸ್ಪೆಕ್ಟರ್​ ಮನೋಹರ್​ ಹಾಗೂ ಸಿಬ್ಬಂದಿ ಮೃತರನ್ನು ದಯಾನಂದ ಸಾಗರ್​ ಆಸ್ಪತ್ರೆಗೆ ಸಾಗಿಸಿದ್ದಾರೆ. ಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್​ ಅಧಿಕಾರಿ ಕಾರ್ತಿಕ್​ ರೆಡ್ಡಿ, ಡಿವೈಎಸ್​ಪಿ ಗಿರಿ, ಇನ್​ಸ್ಪೆಕ್ಟರ್​ ಕೆ.ಎನ್​.ಕೃಷ್ಣ ಪರಿಶೀಲಿಸಿದರು. ವಾಹನಗಳನ್ನು ವಶಕ್ಕೆ ಪಡೆದ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net