ಮುಖ್ಯರಸ್ತೆಗಳಲ್ಲಿ ಬಿಗಿಬಂದೋಬಸ್ತ್

15 rtl 02
Published on

ರಟ್ಟಿಹಳ್ಳಿ: ಲಾಕ್​ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕರು ಅನಗತ್ಯವಾಗಿ ಸಂಚರಿಸವುದಕ್ಕೆ ಕಡಿವಾಣ ಹಾಕಲು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಪಿ.ಎಸ್.ಐ. ಯು.ಜೆ. ಶಶಿಧರ ಹೇಳಿದರು.

‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ದೇಶದ ಸಕಲ ಪ್ರಜೆಗಳ ಆರೋಗ್ಯ ದೃಷ್ಟಿಯಿಂದ ಎಲ್ಲರೂ ಮನೆಯಲ್ಲಿ ಇರಬೇಕು. ಅಗತ್ಯ ವಸ್ತುಗಳಿಗಾಗಿ ಮಾತ್ರ ಹೊರಗಡೆ ಬರಬೇಕು. ಅನಗತ್ಯವಾಗಿ ಹೊರಗಡೆ ಸಂಚರಿಸಿದರೆ, ಕಾನೂನು ಕ್ರಮ ಜರುಗಿಸ ಬೇಕಾಗುತ್ತದೆ. ಈಗಾಗಲೇ ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿ, ಫ್ರೆಂಡ್ಸ್ ಸರ್ಕಲ್, ಭಗತ್​ಸಿಂಗ್ ಸರ್ಕಲ್ ಮತ್ತು ಹಳೇ ಬಸ್ ನಿಲ್ದಾಣದ ಮಧ್ಯಭಾಗದಲ್ಲಿ ಬ್ಯಾರಿಕೇಡ್​ಗಳ ವ್ಯವಸ್ಥೆ ಮಾಡಲಾಗಿದೆ. ಎಲ್ಲ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net