

ಗುಂಡ್ಲುಪೇಟೆ: ಕೇರಳದಲ್ಲಿ ಸತ್ತ ಜಾನುವಾರುಗಳ ಕಳೇಬರಗಳನ್ನು ಕಂಟೈನರ್‌ಗಳಲ್ಲಿ ತಾಲೂಕಿಗೆ ಸಾಗಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಭಾನುವಾರ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದರು.
ಈ ವರೆಗೆ ಲಾರಿ ಹಾಗೂ ತರಕಾರಿ ಸಾಗಣೆ ವಾಹನಗಳಲ್ಲಿ ತ್ಯಾಜ್ಯಗಳನ್ನು ಸಾಗಿಸುತ್ತಿದ್ದ ದಂಧೆಕೋರರು, ಚೆಕ್‌ಪೋಸ್ಟ್ ಸಿಬ್ಬಂದಿಯ ಕಣ್ಣುತಪ್ಪಿಸುವ ಸಲುವಾಗಿ ಮುಚ್ಚಿದ ಕಂಟೈನರ್‌ಗಳಲ್ಲಿ ಸಾಗಿಸಲಾರಂಭಿಸಿದ್ದರು. ಶನಿವಾರ ಕೇರಳದಿಂದ ಪಟ್ಟಣಕ್ಕೆ ಮೃತ ಜಾನುವಾರುಗಳ ಕಳೇಬರಗಳನ್ನು ಸಾಗಿಸುತ್ತಿದ್ದ ಕಂಟೈನರ್ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯಾಧಿಕಾರಿಗಳು ಕಂಟೈನರ್ ಸೇರಿದಂತೆ ಮುಚ್ಚಿದ ವಾಹನಗಳ ತಪಾಸಣೆ ಕೈಗೊಂಡಿದ್ದಾರೆ.
ಭಾನುವಾರ ಮೂಲೆಹೊಳೆ ವಲಯದ ಆರ್.ಎಫ್.ಒ ನಿಸಾರ್ ಅಹಮದ್ ಜತೆಗೂಡಿ ತಪಾಸಣೆ ನಡೆಸಲಾಗಿದೆ. ಅನುಮಾನಾಸ್ಪದ ವಾಹನಗಳ ಮೇಲೆ ಕಣ್ಣಿಟ್ಟು ಬಿಗಿಯಾದ ತಪಾಸಣೆ ನಡೆಸಬೇಕು ಎಂದು ಚೆಕ್‌ಪೋಸ್ಟ್ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದು ಬಂಡೀಪುರ ಉಪವಿಭಾಗದ ಎಸಿಎಫ್ ಎನ್,ಪಿ.ನವೀನ್ ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.