ಜಮೀನಿನಲ್ಲಿ ಹುಲಿ ಗೋಚರ

ಜಮೀನಿನಲ್ಲಿ ಹುಲಿ ಗೋಚರ
Published on

ಹನಗೋಡು: ಹೋಬಳಿಯ ನೇಗತ್ತೂರು ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಗ್ರಾಮದ ಮಹೇಶ ಎಂಬುವರು ಕಲ್ಲಂಗಡಿ ಬೆಳೆಗೆ ನೀರು ಹಾಯಿಸಲು ಶುಕ್ರವಾರ ರಾತ್ರಿ ಜಮೀನಿಗೆ ತೆರಳಿದ ಸಂದರ್ಭ ಹುಲಿ ಕಾಣಿಸಿಕೊಂಡಿದೆ. ಹುಲಿ ಕಂಡು ಗಾಬರಿಗೊಂಡ ಮಹೇಶ್ ಮನೆಗೆ ಹಿಂತಿರುಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಎರಡು ದಿನದ ಹಿಂದೆ ಇದೇ ಗ್ರಾಮದ ನಾಗಮ್ಮ ಅವರ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹುಲಿ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net