ಹುಲಿಗೆಮ್ಮದೇವಿ ಜಾತ್ರೋತ್ಸವ ಅದ್ದೂರಿ

03 ALD01
ಅಳವಂಡಿ ಸಮೀಪದ ಭೈರಾಪುರದಲ್ಲಿ ಶ್ರೀ ಹುಲಿಗೆಮ್ಮದೇವಿ ಜಾತ್ರೆ ಅಂಗವಾಗಿ ಕುಂಭ ಮೆರವಣಿಗೆ ಜರುಗಿತು. ಪ್ರಮುಖರಾದ ನಿಂಗಪ್ಪ ಮೇಟಿ, ದೇವರಡ್ಡಿ ರಡ್ಡೇರ, ಯಲ್ಲಪ್ಪ ಮೆಕ್ಕಿ, ವೀರಯ್ಯ ಸಿಂದೋಗಿ, ವೆಂಕಟೇಶ ಬ್ಯಾಡಗಿ, ಮಂಜಪ್ಪ ಸಿಂದೋಗಿ ಇತರರಿದ್ದರು.
Published on

ಅಳವಂಡಿ: ಸಮೀಪದ ಭೈರಾಪುರದಲ್ಲಿ ಶ್ರೀ ಹುಲಿಗೆಮ್ಮದೇವಿ ಜಾತ್ರೆ ಅಂಗವಾಗಿ ಗಂಗಾ ಪೂಜೆ, ಕುಂಭ ಮೆರವಣಿಗೆ ಮಂಗಳವಾರ ಅದ್ದೂರಿಯಾಗಿ ಜರುಗಿತು.

ದೇವಸ್ಥಾನವನ್ನು ತಳಿರು, ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಮಹಿಳೆಯರ ಕಳಶ, ಕುಂಭ, ವಾದ್ಯ ಮೇಳದೊಂದಿಗೆ ಗಂಗಾಸ್ಥಳಕ್ಕೆ ತೆರಳಿ ಪೂಜೆ ನೆರವೇರಿಸಲಾಯಿತು. ಬಳಿಕ ಅನ್ನದಾಸೋಹ ಸೇವೆ ನಡೆಯಿತು. ಗ್ರಾಮಸ್ಥರು ದೇವಿಗೆ ಉಡಿ ತುಂಬಿ ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net