ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ

Huligemma Devi Jatra Mahotsava
ಶ್ರೀ ಹುಲಿಗೆಮ್ಮದೇವಿ
Published on

ವಿಜಯಪುರ: ತಾಲೂಕಿನ ಉಕುಮನಾಳ ಗ್ರಾಮದ ಶ್ರೀ ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವ ಜೂ. 3 ಮತ್ತುಬ ಜೂ. 4 ರಂದು ವೈಭವದಿಂದ ಜರುಗಲಿದೆ.

ಜೂ. 3 ರಂದು ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಕೊಣ್ಣೂರು ಶ್ರೀ ರಾಯಣ್ಣ ಡೊಳ್ಳಿನ ತಂಡ ಮತ್ತು ದೇವರ ಹಿಪ್ಪರಗಿ ಕರಿಸಿದ್ಧೇಶ್ವರ ಡೊಳ್ಳಿನ ಕಲಾ ತಂಡಗಳೊಂದಿಗೆ ಪಲ್ಲಕ್ಕಿ ಉತ್ಸವ, ಮಧ್ಯಾಹ್ನ ಅನ್ನ ಪ್ರಸಾದ ವಿತರಣೆ ಮತ್ತು ರಾತ್ರಿ 8 ಕ್ಕೆ ಮಾತೋಶ್ರೀ ಶರಣಮ್ಮ ಇಂಗಳೇಶ್ವರ ತಂಡಿದಿಂದ ಜ್ಯೋತಿ ನೃತ್ಯ ಚೌಡಕಿ ಕಾರ್ಯಕ್ರಮ ನಡೆಯಲಿವೆ.

ಜೂ. 4 ರಂದು ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net