ಹುಲಿ ವೇಷ ಬಳಿಯಲು ಬಲು ಡಿಮಾಂಡ್

ಕಂಪ್ಲಿಯಲ್ಲಿ ಚಿತ್ರಕಲಾವಿದರು ಹರಕೆ ಹೊತ್ತವರಿಗೆ ಹುಲಿವೇಷದ ಬಣ್ಣ ಬಳಿಯುತ್ತಿರುವುದು.
ಕಂಪ್ಲಿಯಲ್ಲಿ ಚಿತ್ರಕಲಾವಿದರು ಹರಕೆ ಹೊತ್ತವರಿಗೆ ಹುಲಿವೇಷದ ಬಣ್ಣ ಬಳಿಯುತ್ತಿರುವುದು.
Published on

ಕಂಪ್ಲಿ: ಮೊಹರಂ ಹಿನ್ನೆಲೆಯಲ್ಲಿ ಹರಕೆ ಹೊತ್ತವರು ಹುಲಿವೇಷ ಧರಿಸಿ ಹಲಗೆ ವಾದನಕ್ಕೆ ನೃತ್ಯ ಮಾಡುತ್ತಾ ಹರಕೆ ತೀರಿಸುತ್ತಿದ್ದಾರೆ.

ಪಟ್ಟಣದ ಚಿತ್ರಗಾರ ಕಲಾವಿದರ ಬಳಿ 3, 5 ಮತ್ತು 7ನೇ ದಿನದ ಸವಾರಿಯಲ್ಲಿ ಹುಲಿವೇಷದ ಬಣ್ಣ ಬಳಸಿಕೊಂಡು ಹರಕೆ ಸಲ್ಲಿಸಿದರು. ಹುಲಿವೇಷದ ಬಣ್ಣ ಬಳಿದುಕೊಳ್ಳಲು ಬಳ್ಳಾರಿ, ಸಿರಗುಪ್ಪ, ಗಂಗಾವತಿ, ಕುಡತಿನಿಯಿಂದಲೂ ಜನರು ಆಗಮಿಸಿದ್ದರು. ಈ ಕುರಿತು ಮಾತನಾಡಿದ ಭಕ್ತ ರೇವಣಯ್ಯ, ಕಳೆದ 31 ವರ್ಷಗಳಿಂದ ಹುಲಿವೇಷ ಧರಿಸಿ ಹರಕೆ ತೀರಿಸುತ್ತಿದ್ದೇನೆ. ಮೊದಲಿಗೆ ಹುಲಿವೇಷದ ಬಣ್ಣ ಬಳಿದುಕೊಂಡಾಗ ಕಲಾಕಾರರಿಗೆ 25 ರೂ. ಕೊಟ್ಟಿದ್ದು, ಇದೀಗ 700 ರೂ. ನೀಡಬೇಕಾಗಿದೆ. ಹರಕೆಯಿಂದ ನಮ್ಮ ಮನೆತನಕ್ಕೆ ಒಳಿತಾಗಿದೆ. ನನ್ನೊಡನೆ, ನನ್ನ ಮಗನೂ ಹುಲಿವೇಷದ ಹರಕೆ ಹೊತ್ತಿದ್ದಾನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net