ಶ್ರೀಕೃಷ್ಣಜನ್ಮಾಷ್ಟಮಿ ಮಾಸೋತ್ಸವದಲ್ಲಿ ಹುಲಿವೇಷ ಸ್ಪರ್ಧೆ

puttige sri
Published on

ಉಡುಪಿ: ನಾಡಹಬ್ಬ "ಶ್ರೀಕೃಷ್ಣಜಯಂತಿ' ಉತ್ಸವವನ್ನು ನಿಟ್ಟಿನಲ್ಲಿ ವೈಶಿಷ್ಟ ಆಚರಿಸುವ ನಿಟ್ಟಿನಲ್ಲಿ 1 ತಿಂಗಳ ಪರ್ಯಂತ ವಿವಿಧ ಸಾಂಸತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಆ.27ರಂದು ಸಾಯಂಕಾಲ 4 ಗಂಟೆಯಿಂದ ರಾಜಾಂಗಣದಲ್ಲಿ ಸಾಂಪ್ರದಾಯಿಕ ಸ್ಪರ್ಧೆಗಳಾದ ಹುಲಿವೇಷ, ಜಾನಪದ ವೇಷ, ಪೌರಾಣಿಕ ನೃತ್ಯ ಸ್ಪರ್ಧೆಗಳು ನಡೆಯಲಿವೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಹುಲಿವೇಷ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ 1.15 ಲಕ್ಷ ರೂ. ಮೌಲ್ಯದ ಟಿವಿಎಸ್​ ಟ್ಯೂಬ್​ ಎಲೆಕ್ಟ್ರಿಕಲ್​ ಸ್ಕೂಟರ್​, ದ್ವೀತಿಯ ಬಹುಮಾನ 50 ಸಾವಿರ ರೂ., ತೃತೀಯ ಬಹುಮಾನ 25 ಸಾವಿರ ರೂ., ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 25 ಸಾವಿರ ರೂ., ದ್ವೀತಿಯ ಬಹುಮಾನ 15 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ., ಪೌರಾಣಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 30 ಸಾವಿರ ರೂ., ದ್ವೀತಿಯ ಬಹುಮಾನ 20 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ನಿಗದಿಪಡಿಸಲಾಗಿದೆ ಎಂದರು.

ಮಠದ ದಿವಾನ್​ ನಾಗರಾಜ ಆಚಾರ್ಯ ಮಾತನಾಡಿ, ಆ.2ರಂದು ಸಾಯಂಕಾಲ 5 ಗಂಟೆಗೆ ಗೀತಾ ಮಂದಿರದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದ್ದು, ಶಿವಮೊಗ್ಗ ಸಂಸದ ಬಿ.ವೈ ರಾವೇಂದ್ರ ಉದ್ಘಾಟಿಸಲಿದ್ದಾರೆ. 23ರಂದು 5 ಗಂಟೆಗೆ ಲಡ್ಡು ಉತ್ಸವವನ್ನು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಲಿದ್ದಾರೆ. 24ರಂದು 5 ಗಂಟೆಗೆ ಗೀತೋತ್ಸವಕ್ಕೆ ಕಾನೂನು ಸಚಿವ ಎಚ್​.ಕೆ. ಪಾಟೀಲ್​ ಚಾಲನೆ ನೀಡಲಿದ್ದಾರೆ. 25ರಂದು 5 ಗಂಟೆಗೆ ರಾಜಾಂಗಣದಲ್ಲಿ ನಡೆಯುವ ನೃತ್ಯೋತ್ಸವವನ್ನು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಉದ್ಘಾಟಿಸಲಿದ್ದಾರೆ. ಚಿತ್ರನಟ ರಿಷಬ್​ ಶೆಟ್ಟಿ ಮುಖ್ಯ ಅತಿಥಿಯಾಗಿರುವರು. 26ರಂದು ಬೆಳಗ್ಗೆ 9 ಗಂಟೆಗೆ ಮಧ್ವ ಮಂಟಪದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಡೋಲೋತ್ಸವ ನಡೆಯಲಿದ್ದು, ಕೇಂದ್ರ ಸಚಿವರಾದ ಎಚ್​.ಡಿ. ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್​, ಕಿಶನ್​ ರೆಡ್ಡಿ, ಸಂಸದ ಬೃಜೇಶ್​ ಚೌಟ ಪಾಲ್ಗೊಳ್ಳಲಿದ್ದಾರೆ. 27ರಂದು ಮಧ್ಯಾಹ್ನ 12ರಿಂದ ರಥಬೀದಿಯಲ್ಲಿ ಮಲ್ಲಕಂಬ ಪ್ರದರ್ಶನ ನಡೆಯಲಿದ್ದು, 2 ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಉದ್ಘಾಟಿಸಲಿದ್ದಾರೆ. 28ರಂದು ಸಾಯಂಕಾಲ 5 ಗಂಟೆಗೆ ರಾಜಾಂಗಣದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಹಿರಿಯ ಸಾಹಿತಿ ಎಸ್​.ಎಲ್​. ಭೈರಪ್ಪ ಉಪನ್ಯಾಸ ನೀಡಲಿದ್ದಾರೆ ಎಂದರು.

ವಿದ್ವಾನ್​ ಮಹಿತೋಷ್​ ಆಚಾರ್ಯ ಮಾತನಾಡಿ, ಶ್ರೀಕೃಷ್ಣ ಮಾಸೋತ್ಸವ ಅಂಗವಾಗಿ ರಾಜಾಂಗಣದಲ್ಲಿ ವಿವಿಧ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆ.23ರಂದು ಸಾಯಂಕಾಲ 6 ಗಂಟೆಗೆ ಡಾ. ಪ್ರಜ್ಞಾ ಮಾರ್ಪಳ್ಳಿ , 24ರಂದು ಚಕ್ರವರ್ತಿ ಸೂಲಿಬೆಲೆ, 25ರಂದು ಡಾ.ಎಚ್​.ಎಸ್​ ಪ್ರೇಮಾ, 26ರಂದು ಎಸ್​.ಎನ್​. ಸೇತುರಾಮ್​ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು. ಮಾಜಿ ಶಾಸಕ ರಘುಪತಿ ಭಟ್‌ , ಪುತ್ತಿಗೆ ಮಠದ ರಮೇಶ್‌ ಭಟ್‌, ರವೀಂದ್ರ ಆಚಾಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net