ಮೇಕೆ ಮೇಲೆ ಹುಲಿ ದಾಳಿ

ಮೇಕೆ ಮೇಲೆ ಹುಲಿ ದಾಳಿ
Published on

ಹನಗೋಡು: ಮೇಯುತ್ತಿದ್ದ ಮೇಕೆ ಮೇಲೆ ಹುಲಿ ದಾಳಿ ನಡೆಸಿ ಸಾಯಿಸಿರುವ ಪ್ರಕರಣ ಕಚುವಿನಹಳ್ಳಿಯಲ್ಲಿ ನಡೆದಿದೆ.

ಭಾನುವಾರ ಹನಗೋಡು ಹೋಬಳಿಯ ಕಚುವಿನಹಳ್ಳಿ ಗ್ರಾಮದ ಅಣ್ಣೇಗೌಡ ಅವರ ಪತ್ನಿ ಪ್ರೇಮಮ್ಮ ಹಾಗೂ ಚಿಕ್ಕೇಗೌಡರ ಪತ್ನಿ ರೇಣುಕಾ ಗ್ರಾಮದ ಹೊಸಕೆರೆ ಕೋಡಿ ಭಾಗದಲ್ಲಿರುವ ಹೆಬ್ಬಾಳದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದರು. ಬಿದಿರು ಪೊದೆಯಿಂದ ಹೊರ ಬಂದ ಹುಲಿ ಮೇಕೆಯ ಮೇಲೆ ದಾಳಿ ನಡೆಸಿದೆ.

ಹುಲಿ ಕಂಡ ಪ್ರೇಮಮ್ಮ, ರೇಣುಕಾ ಹಾಗೂ ಅಕ್ಕ ಪಕ್ಕದಲ್ಲಿದ್ದ ದನಗಾಯಿಗಳು ಜೋರಾಗಿ ಚೀರಾಟ ನಡೆಸಿದ್ದರಿಂದ ಹುಲಿ ಕುರಿಯನ್ನು ಅಲ್ಲೇ ಬಿಟ್ಟು ಓಡಿಹೋಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net