ತಿಗಳರ ಸಂಘ ಪದಾಧಿಕಾರಿಗಳ ಆಯ್ಕೆ

Krishanamurthy
Published on

ಬೆಂಗಳೂರು: ಕರ್ನಾಟಕ ರಾಜ್ಯ ತಿಗಳರ (ವಹ್ನಿಕುಲ ಕ್ಷತ್ರಿಯ) ಸಂಘದ ಅಧ್ಯಕ್ಷರಾಗಿ ಮು.ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ಶ್ರೀಧರ್, ಖಜಾಂಚಿಯಾಗಿ ಜಿ.ಬಾಬು ಆದಿತ್ಯ, ಉಪಾಧ್ಯಕ್ಷರಾಗಿ ಎಂ.ಕುಪ್ಪುಸ್ವಾಮಿ, ಎಂ.ಶ್ರೀನಿವಾಸ್, ಎಂ.ಡಿ.ನಾರಾಯಣಸ್ವಾಮಿ, ಕೆ.ಪಿ.ಕೃಷ್ಣ, ಎಂ.ಜಯರಾಂ, ವೈಘಿ.ಎನ್.ಶಾಮಣ್ಣ, ವೈ.ವಿ.ಮುನಿರಾಜು, ಎನ್.ವಿ.ಗೋಪಿ, ಸಂಘಟನಾ ಕಾರ್ಯದರ್ಶಿಗಳಾಗಿ ಎಂ.ಎನ್.ಮಂಜುನಾಥ್, ಜೆ.ಆರ್.ಮುನಿವೀರಣ್ಣ, ಎಸ್.ಚಿತ್ರ, ಸಹ ಕಾರ್ಯದರ್ಶಿಗಳಾಗಿ ತಿಗಳರಪೇಟೆಯ ಕೆ.ಗಿರೀಶ್, ಲೆಕ್ಕ ಪರಿಶೋಧಕರಾಗಿ ಕನಕಪುರದ ಕೆ.ಪಿ.ಪೆರುಮಾಳಯ್ಯ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net