

ಶಿರ್ವ: ನಾವಿನ್ಯ ಮತ್ತು ಉದ್ಯಮಶೀಲತೆ ಉತ್ತೇಜಿಸುವ ಉದ್ದೇಶದಿಂದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಸೆಕ್ಷನ್ ಇನ್ಫಿನ್ 8, ಮಂಗಳೂರು ಇದರೊಂದಿಗೆ ಗುರುವಾರ ಒಡಂಬಡಿಕೆಗೆ ಸಹಿ ಹಾಕಲಾಯಿತು. ಸಂಸ್ಥಾಪಕ ವಿಶ್ವಾಸ್, ನಿರ್ದೇಶಕ ಡಾ.ಶಿವಕಿರಣ್ ಮಖಂ, ಯೋಜನೆ ಮತ್ತು ತಂತ್ರಜ್ಞಾನ ನಿರ್ದೇಶಕರು, ಅರವಿಂದ್ ಸಿ.ಕುಮಾರ್, ಸೆಕ್ಷನ್ ಇನ್ಫಿನ್ 8, ಮಂಗಳೂರು ಮತ್ತು ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಜಗದೀಶ್ ಆಚಾರ್ಯ, ಹರೀಶ್ ಬೆಳ್ಮಣ್, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್, ಎಂ.ಬಿ.ಎ ನಿರ್ದೇಶಕ ಸೂರಜ್ ಪ್ರಾನ್ಸಿಸ್ ನೊರೊನ್ಹಾ ಮತ್ತು ಡೀನ್ ಡಾ.ನಾಗರಾಜ್ ಭಟ್ ಉಪಸ್ಥಿತರಿದ್ದರು.