ಥೈರಾಯ್ಡ್ ರೋಗ ತಡೆಗೆ ಸಸಾರಜನಕಯುಕ್ತ ಆಹಾರ ಸೇವಿಸಿ

Untitled design (7)
ಸಂಡೂರು ಪಟ್ಟಣದ ಬಾಲ ಚೈತನ್ಯ ಆರೈಕೆ ಕೆಂದ್ರದಲ್ಲಿ ವಿಶ್ವ ಥೈರಾಯ್ಡ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಡಾ.ರಾಮಕೃಷ್ಣ ಗುರುವಾರ ಮಾತನಾಡಿದರು.
Published on

ಸಂಡೂರು: ಥೈರಾಯ್ಡ್ ಗ್ರಂಥಿಯ ಅಸಮರ್ಪಕ ಕ್ರಿಯೆಯಿಂದ ಮಹಿಳೆ ಮತ್ತು ಮಕ್ಕಳಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತಿದ್ದು, ಸಸಾರಜನಕಯುಕ್ತ ಆಹಾರ ಸೇವಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಮಕ್ಕಳ ತಜ್ಞ ಡಾ.ರಾಮಕೃಷ್ಣ ಹೇಳಿದರು.

ವಿಶ್ವ ಥೈರಾಯ್ಡ್ ದಿನಾಚರಣೆ ಕುರಿತು ಜಾಗೃತಿ

ಪಟ್ಟಣದ ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಬಾಲ ಚೈತನ್ಯ ಆರೈಕೆ ಕೆಂದ್ರದಲ್ಲಿ ವಿಶ್ವ ಥೈರಾಯ್ಡ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಗುರುವಾರ ಮಾತನಾಡಿದರು. ಗಂಟಲು ಭಾಗದಲ್ಲಿರುವ ಚಿಟ್ಟೆಯಾಕಾರದಲ್ಲಿರುವ ಥೈರಾಯ್ಡ ಗ್ರಂಥಿ ಅಸಮರ್ಪಕ ಹಾರ್ಮೋನ್‌ಗಳನ್ನು ಬಿಡುಗಡೆಯಿಂದ ಮಹಿಳೆಯ ಮತ್ತು ಮಕ್ಕಳಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತವೆ.ಇದು ಹತ್ತು ಜನರಲ್ಲಿ ಒಬ್ಬರಿಗೆ ಕಂಡುಬರುತ್ತದೆ.

ಮಕ್ಕಳಲ್ಲಿ ಬುದ್ದಿ ಮಾಂಧ್ಯತೆ,ನೆನಪಿನ ಶಕ್ತಿ ಕಡಿಮೆಯಾಗುತ್ತದೆ

ಹೈಪೋಥೈರಾಯ್ಡಿ ಸಮ್‌ನಿಂದ ಅಧಿಕ ಮುಟ್ಟಿನ ರಕ್ತಸ್ರಾವ,ಬಂಜೆತನ, ಮಲಬದ್ಧತೆ, ಖಿನ್ನತೆ, ತೂಕ ಹೆಚ್ಚಳ, ನಿಧಾನ ಹೃದಯ ಬಡಿತ, ವರಟು ಕೂದಲು, ಕರ್ಕಶ ಧ್ವನಿ, ಪದೇ ಪದೇ ಶೀತ, ಗಳಗಂಡ ಕಾಯಿಲೆ, ಆಯಾಸ, ಕ್ಷಿಪ್ರ ಹೃದಯ ಬಡಿತ, ಅತಿಯಾದ ಬೆವರುವಿಕೆ, ಬೆಚ್ಚಗಿನ ಚರ್ಮ, ಕೂದಲು ಉದುರುವಿಕೆ, ನಿದ್ರಾ ಹೀನತೆಯಂತಹ ಸಮಸ್ಯೆಗಳು ಉಂಟಾಗಬಹುದು.
ಮಕ್ಕಳಲ್ಲಿ ಬುದ್ದಿ ಮಾಂಧ್ಯತೆ,ನೆನಪಿನ ಶಕ್ತಿ ಕಡಿಮೆಯಾಗುವಿಕೆ, ದೈಹಿಕ ಬೆಳವಣಿಗೆ ಕುಂಠಿತವಾಗಬಹುದು. ಈ ಸಮಸ್ಯೆ ಕಂಡುಬಂದರೆ ಪರೀಕ್ಷೆಗೆ ಒಳಗಾಗಿ ಚಿಕಿತ್ಸೆ ಪಡೆಯಬೇಕು. ಇದನ್ನು ತಡೆಗಟ್ಟಲು ಸಸಾರಜನಕಯುಕ್ತ ಆಹಾರ ಸೇವನೆ, ಮೊಳಕೆ ಕಾಳು, ಕ್ಯಾರೆಟ್ಟ , ಹಸಿರು ಸೊಪ್ಪು, ಸೀಗಡಿ, ಮೀನು, ಅಯೋಡಿನ್‌ಯುಕ್ತ ಉಪ್ಪು ಬಳಸಬೇಕು ಎಂದರು.

ಹೆರಿಗೆಯಾದ ಅರ್ಧ ಗಂಟೆಯೊಳಗೆ ಹಾಲೂಣಿಸಬೇಕು

ಮಕ್ಕಳ ತಜ್ಞೆ ಡಾ.ಶಿವಾನಿ ಮಾತನಾಡಿ, ಕೊಲೆಸ್ಟ್ರಂಮ್‌ಯುಕ್ತ ಹಳದಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳದ ಅಂಶವಿದ್ದು ಹೆರಿಗೆಯಾದ ಅರ್ಧ ಗಂಟೆಯೊಳಗೆ ಹಾಲೂಣಿಸಬೇಕು. ಆರು ತಿಂಗಳು ಮಾತ್ರ ಎದೆ ಹಾಲು ನೀಡಿ, ನಂತರ ಪೂರಕ ಆಹಾರದೊಂದಿಗೆ ಮುಂದುವರೆಸಬೇಕು. ತಾಯಂದಿರು ಎದೆ ಹಾಲು ಕುಡಿಸದಿದ್ದರೆ ಸ್ತನ ಕ್ಯಾನ್ಸರ್ ಉಂಟಾಗಬಹುದು ಎಂದರು.


ವಿಮ್ಸ್‌ನ ಮಕ್ಕಳ ತಜ್ಞರಾದ ಡಾ.ನಿಕಿತಾ, ಡಾ.ಅಕ್ಷಯ್ ಎಕ್ಬೋಟೆ, ಬಿಹೆಚ್‌ಇಒ ಶಿವಪ್ಪ, ಶುಶ್ರೂಕಿ ನಾಗಮ್ಮ, ಫಾರ್ಮಸಿ ಅಧಿಕಾರಿ ದೀಪಾ, ಮಹಿಳಾ ಮೇಲ್ವಿಚಾರಕಿ ಲಕ್ಷ್ಮೀಬಾಯಿ ಕಂಕಣವಾಡಿ, ಶಾರದಾ ಶಿಂದೆ, ಗೀತಾ ಅರ್ಕಾಚಾರಿ, ತಾಯಂದಿರಾದ ತೇಜಸ್ವಿನಿ, ರೇಷ್ಮಾ, ಗಾಯಿತ್ರಿ, ರೇಣುಕಾ, ದುರುಗಮ್ಮ, ತಿಪ್ಪಮ್ಮ, ಸರೋಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net