

ಬೆಳಗಾವಿ: ವಿಶ್ವ ಥೈರಾಯ್ಡ್ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಎಂಡೋಕ್ರಿನಾಲಜಿ ವಿಭಾಗದ ಆಶ್ರಯದಲ್ಲಿ ಥೈರಾಯ್ಡ್ ಉಚಿತ ತಪಾಸಣೆ ಶಿಬಿರವನ್ನು ಮೇ.25 ರಂದು ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದೆ. ಅಂದು ಗುರುವಾರ ಬೆಳಗ್ಗೆ 10 ರಿಂದ ಮ.1 ಗಂಟೆಯವರೆಗೆ ಶಿಬಿರಕ್ಕೆ ಆಗಮಿಸಬಹುದು.
ತಿಂಗಳ ಋತುಚಕ್ರದಲ್ಲಿ ಏರುಪೇರು, ಮಕ್ಕಳಲ್ಲಿ ಬೆಳವಣಿಗೆ ಇಲ್ಲದಿರುವುದು, ದೇಹ ತೂಕದಲ್ಲಿ ವಿಪರೀತ ಹೆಚ್ಚಳ, ಜೀರ್ಣಕ್ರಿಯೆಯಲ್ಲಿ ತೊಂದರೆ, ಅಶಕ್ತತೆ, ತೀವ್ರತರವಾದ ಚಳಿ, ಕೂದಲು ಉದುರುವುದು ಹಾಗೂ ಅತಿಯಾದ ನಿದ್ದೆ ಸೇರಿದಂತೆ ಥೈರಾಯ್ಡಗೆ ಸಂಂಧಿಸಿದ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಕೊಳ್ಳುವಂತೆ ಕೋರಲಾಗಿದೆ. ಶಿಬಿರಕ್ಕೆ ಆಗಮಿಸುವ ರೋಗಿಗಳಿಗೆ ಡಾ. ವಿಕ್ರಾಂತ ಘಟನಟ್ಟಿ, ಡಾ.ಮಂಜುನಾಥ ಗೊರೊಶಿ ಹಾಗೂ ಡಾ.ವಾನಿಶ್ರೀ (ಎಂಡೊಕ್ರಿನಾಲಾಜಿಸ್ಟ) ಅವರು ರೋಗಿಗಳನ್ನು ಸಮಗ್ರವಾಗಿ ತಪಾಸಣೆ ನಡೆಸಿ, ಸೂಕ್ತ ಸಲಹೆ ಸೂಚನೆ ನೀಡಲಿದ್ದಾರೆ. ಥೈರಾಯ್ಡ್ ರಕ್ತ ತಪಾಸಣೆ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಜನಸಂಪರ್ಕ ವಿಭಾಗವನ್ನು ಸಂಪರ್ಕಿಸುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.