ಮುಂಡರಗಿಯಲ್ಲಿ ಗುಡುಗು-ಸಿಡಿಲಿನ ಅಬ್ಬರ!

12MDG5 PHOTO NEWS BELE HAANI
Published on

ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ಹಲವೆಡೆ ಶುಕ್ರವಾರ ರಾತ್ರಿ ಗುಡುಗು- ಸಿಡಿಲು ಸಹಿತ ಸುರಿದ ಭಾರಿ ಮಳೆಯಿಂದ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿದೆ.
ಪಟ್ಟಣ, ಬರದೂರ, ತಾಮ್ರಗುಂಡಿ ಮೊದಲಾದ ಕಡೆಗಳಲ್ಲಿ ಗೋವಿನಜೋಳ, ಉಳ್ಳಾಗಡ್ಡಿ, ಶೇಂಗಾ ಬೆಳೆಯಲ್ಲಿ ನೀರು ನಿಂತುಕೊಂಡಿದೆ. ಇದರಿಂದ ರೈತರು ಬೆಳೆ ಹಾನಿ ಸಂಭವಿಸಬಹುದು ಎನ್ನುವ ಆತಂಕ ಮನೆ ಮಾಡಿದೆ. ಹಳ್ಳ, ಚೆಕ್​ಡ್ಯಾಂಗಳಲ್ಲಿ ಮಳೆ ನೀರು ಹರಿಯಿತು.
ಗೋವಿನಜೋಳ ಬೆಳೆ ಕಟಾವು ಮಾಡುತ್ತಿದ್ದು, ಮಳೆಗೆ ತೆನೆಗಳು ಬಾಗಿಕೊಂಡು ತೇವಾಂಶದಿಂದ ತೆನೆಗಳಲ್ಲಿ ಮೊಳಕೆಯೊಡೆಯುವ ಲಕ್ಷಣ ಗೋಚರಿಸುತ್ತಿವೆ. ಉಳ್ಳಾಗಡ್ಡಿ ಇನ್ನಿತರ ಬೆಳೆಗೆ ಹಾನಿ ಉಂಟಾಗುವ ವಾತಾವರಣ ನಿರ್ಮಾಣ ಮಾಡಿತು. ಗುರುವಾರ ರಾತ್ರಿಯು ರಭಸದ ಮಳೆ ಸುರಿಯಿತು.
ಒಂದೆಡೆ ಕಟಾವು ಹಂತದಲ್ಲಿರುವ ಬೆಳೆಗಳಿಗೆ ಮಳೆ ಆತಂಕ ಮೂಡಿಸಿದ್ದರೆ, ಮತ್ತೊಂದೆಡೆ ಭೂಮಿ ಹಸಿಯಾಗಿದ್ದು, ಹಿಂಗಾರು ಬಿತ್ತನೆ ಮಾಡಿದವರಿಗೆ ಮತ್ತು ಬಿತ್ತನೆ ಮಾಡುವ ರೈತರಿಗೆ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net