ಥಗ್‌ಲೈಫ್ ಚಿತ್ರ ಬ್ಯಾನ್ ಮಾಡಿ

30SND-03
ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ತಾಲೂಕು ಘಟಕ ಸಿಂಧನೂರಿನಲ್ಲಿ ಪ್ರತಿಭಟನೆ ನಡೆಸಿತು. ತಾಲೂಕು ಘಟಕ ಅಧ್ಯಕ್ಷ ಲಕ್ಷ್ಮಣ ಭೋವಿ, ಗೌರವಾಧ್ಯಕ್ಷ ಕಾಳಪ್ಪ ಮೇಸ್ತ್ರಿ, ತಾಲೂಕು ಉಪಾಧ್ಯಕ್ಷರಾದ ಬಸವರಾಜ ವಿಶ್ವಕರ್ಮ, ಶಂಕರ ಬ್ಯಾಡಗಿ ಇತರರಿದ್ದರು.
Published on

ಸಿಂಧನೂರು: ಕನ್ನಡಿಗರ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ತಮಿಳು ಭಾಷೆ ಮೇಲು ಮಾಡಿಕೊಂಡು, ಕನ್ನಡ ಭಾಷೆ ಬಗ್ಗೆ ಅವಹೇಳನೆ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಪರ ಸಂಘಟನೆಗಳ ಒಕ್ಕೂಟ) ತಾಲೂಕು ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಸಂಸ್ಕೃತಿ, ಸ್ವಾಭಿಮಾನದ ಭಾಷೆಯಾಗಿದೆ. ಆದರೆ, ತಮಿಳು ನಟ ಕಮಲ್ ಹಾಸನ್ ಸಿನಿಮಾ ಬಿಡುಗಡೆ ಸಮಾರಂಭದಲ್ಲಿ ತಮಿಳು ಭಾಷೆಯಿಂದಲೇ ಕನ್ನಡ ಭಾಷೆ ಉಗಮವಾಯಿತು ಎಂದು ಹೇಳಿರುವುದು ಅಕ್ಷಮ್ಯ ಅಪರಾಧವಾಗಿದೆ.

ಇದರಿಂದ ಕೋಟ್ಯಾಂತರ ಕನ್ನಡ ಮನಸ್ಸುಗಳಿಗೆ ನೋವಾಗಿದೆ. ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಆಕ್ರೋಶಕ್ಯಕ್ಕೆ ಕಾರಣವಾಗಿದೆ. ನಟ ಕ್ಷಮೆಯಾಚಿಸಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ, ಥಗ್‌ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು.

ಒಂದು ವೇಳೆ ಬಿಡುಗಡೆ ಮಾಡಿದರೆ, ಕರವೇಯಿಂದ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆಂದು ಎಚ್ಚರಿಸಿದರು. ತಾಲೂಕು ಘಟಕ ಅಧ್ಯಕ್ಷ ಲಕ್ಷ್ಮಣ ಭೋವಿ, ಗೌರವಾಧ್ಯಕ್ಷ ಕಾಳಪ್ಪ ಮೇಸ್ತ್ರಿ, ತಾಲೂಕು ಉಪಾಧ್ಯಕ್ಷರಾದ ಬಸವರಾಜ ವಿಶ್ವಕರ್ಮ, ಶಂಕರ ಬ್ಯಾಡಗಿ, ಪ್ರಮುಖರಾದ ರಾಜಸಾಬ, ಗುರುರಾಜ, ಖಜೂರ ಬಾಷಾ, ಅಲ್ಲಾ ಬಂದ್, ಮಹಿಬೂಬ ಗೋಮರ್ಸಿ, ಶಂಕರ, ವೆಂಕೋಬ, ಶಫಿ, ಮರಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net