

ಮುಂಡಗೋಡ: ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ MID DAY MEALS ಯೋಜನೆಯಡಿ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಮೊಟ್ಟೆ EGG ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ. ಆದರೆ, ಕೆಲವೆಡೆ ನೀಡುವ ಮೊಟ್ಟೆಗಳನ್ನು ತಿನ್ನುವ ಮೊದಲೇ ಮಕ್ಕಳಿಗೆ ವಾಕರಿಕೆ ಬರಿಸುತ್ತವೆ.
ಮಕ್ಕಳಿಗೆ ವಾರದ ಎರಡು ದಿನ ಸರ್ಕಾರ ಮೊಟ್ಟೆ ನೀಡುತ್ತಿದ್ದರೆ, ಅಜೀಂ ಪ್ರೇಮ್ೕ ಫೌಂಡೇಷನ್ ವತಿಯಿಂದ ವಾರದಲ್ಲಿ ನಾಲ್ಕು ದಿನ ಮೊಟ್ಟೆ ವಿತರಿಸಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆ ಮುಂಡಗೋ ತಾಲೂಕಿನ ಗ್ರಾಮೀಣ ಭಾಗದ ಕೆಲ ಶಾಲೆಗಳಲ್ಲಿ ಬಿಸಿಯೂಟದಲ್ಲಿ ನೀಡುವ ಮೊಟ್ಟೆ ತೀರ ಕಳಪೆಯಾಗಿದೆ. ಸರ್ಕಾರದ ನಿಯಮದಂತೆ ಒಂದು ಮೊಟ್ಟೆ ತೂಕ ಕನಿಷ್ಠ 50ಗ್ರಾಂ ಇರಬೇಕು. ಆದರೆ, ಕೆಲ ಶಾಲೆಗಳಲ್ಲಿ ಕಡಿಮೆ ತೂಕದ ಹಾಗೂ ಕಡಿಮೆ ದರದಲ್ಲಿ ಮೊಟ್ಟೆಗಳನ್ನು ಖರೀದಿಸಿ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರದ ನಿಯಮದ ಪ್ರಕಾರ ಒಂದು ಮೊಟ್ಟೆಗೆ 6 ರೂ. ನೀಡಲಾಗುತ್ತದೆ. ಇದರಲ್ಲಿ ಸಾಗಾಣಿಕೆ ವೆಚ್ಚ 20ಪೈಸೆ, ಮೊಟ್ಟೆಯ ಸಿಪ್ಪೆ ತೆಗೆಯವ ಅಡುಗೆ ಸಿಬ್ಬಂದಿಗೆ 30 ಪೈಸೆ ಮತ್ತು ಇಂಧನ ವೆಚ್ಚ 50 ಪೈಸೆ ಸೇರಿದೆ. ಆದರೆ, ಕೆಲವೊಮ್ಮೆ ಮೊಟ್ಟೆಯ ದರ ಹೆಚ್ಚಾಗುತ್ತಿರುವುದರಿಂದ ಕಳಪೆ ಮಟ್ಟದ ಮೊಟ್ಟೆ ಖರೀದಿಸಿ ಶಾಲೆಗಳಿಗೆ ವಿತರಿಸಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಕಳಪೆ ಮಟ್ಟದ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಮೊಟ್ಟೆಗಳು ನೋಡಲು ಚೆನ್ನಾಗಿ ಇರುತ್ತವೆ. ಕುದಿಸಿ ಸಿಪ್ಪೆ ತೆಗೆದಾಗ ಕೊಳೆತಿರುವುದು ಕಂಡುಬರುತ್ತಿದ್ದು, ವಾಸನೆಯೂ ಬರುತ್ತಿರುತ್ತದೆ.| ಹೆಸರು ಹೇಳಲಿಚ್ಛಿಸದ ಶಿಕ್ಷಕ ಶಾಲೆಯ ಶಿಕ್ಷಕರು ಮೊಟ್ಟೆಗಳನ್ನು ತೆಗೆದುಕೊಳ್ಳುವಾಗ ಪರಿಶೀಲಿಸಿ ತೆಗೆದುಕೊಳ್ಳಬೇಕು. ಪರೀಕ್ಷಿಸಲು ಮೊದಲು ಮೊಟ್ಟೆಯನ್ನು ನೀರಿನಲ್ಲಿ ಹಾಕಿದಾಗ ಕೊಳೆತ ಮೊಟ್ಟೆ ತೇಲುತ್ತದೆ. ಗುಣಮಟ್ಟದ ಮೊಟ್ಟೆ ಮುಳುಗುತ್ತದೆ. ಈ ಬಗ್ಗೆ ಎಲ್ಲ ಶಿಕ್ಷಕರಿಗೆ ತಿಳಿಸಿದ್ದೇನೆ. ಕಳಪೆ ಗುಣಮಟ್ಟದ ಮೊಟ್ಟೆ ತೆಗೆದುಕೊಂಡರೆ ಶಿಕ್ಷಕರನ್ನೇ ಹೊಣೆಗಾರಿಕೆ ಮಾಡುತ್ತೇವೆ. | ರಫೀಕಸಾಬ ಮೀರಾನಾಯಕ, ಸಹಾಯಕ ನಿರ್ದೇಶಕ, ಅಕ್ಷರ ದಾಸೋಹ