ನೆಲ್ಯಾಡಿ ಸಂತ ಜಾರ್ಜ್ ಸಂಸ್ಥೆ ಚಾಂಪಿಯನ್ : ತಾಲೂಕುಮಟ್ಟದ ತ್ರೋಬಾಲ್ ಪಂದ್ಯಾಟ ಆಯೋಜನೆ

New Project (13)
Published on

ಸುಬ್ರಹ್ಮಣ್ಯ: ಇಲ್ಲಿನ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜನೆಗೊಂಡ ಕಡಬ ತಾಲೂಕುಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡಗಳೆರಡೂ ಚಾಂಪಿಯನ್ ಪಟ್ಟ ಅಲಂಕರಿಸಿವೆ.

ಆತಿಥೇಯ ಎಸ್‌ಎಸ್‌ಪಿಯು ಕಾಲೇಜಿನ ಅವಳಿ ತಂಡಗಳು ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಗೊಂಡವು. ಬಾಲಕರ ವಿಭಾಗದಲ್ಲಿ ಅಪ್ಲಲಾಲ್ ಅತ್ಯುತ್ತಮ ಆಲ್‌ರೌಂಡರ್ ಆಟಗಾರ, ಸುಬ್ರಹ್ಮಣ್ಯ ಕಾಲೇಜಿನ ಸಾಯಿ ಸ್ಮರಣ್ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದರು. ಬಾಲಕಿಯರ ವಿಭಾಗದಲ್ಲಿ ನೆಲ್ಯಾಡಿಯ ಹರ್ಷ ಅತ್ಯುತ್ತಮ ಆಲ್ ರೌಂಡರ್ ಆಟಗಾರ್ತಿ, ಸುಬ್ರಹ್ಮಣ್ಯದ ರಕ್ಷಾ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದರು.

ಪ್ರಶಸ್ತಿ ಪ್ರದಾನ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ಕೆ.ಎಸ್.ಎಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಪಿ.ಡಿ, ಎಸ್ಸೆಸ್ಪಿಯು ಪ್ರಾಚಾರ್ಯ ಸೋಮಶೇಖರ ನಾಯಕ್, ತಾಲೂಕು ಕ್ರೀಡಾ ಸಂಘದ ಅಧ್ಯಕ್ಷ ಹ್ಯಾರೀಸ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಂದಾ ಹರೀಶ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘ ಸಂಚಾಲಕ ಜಯಪ್ರಕಾಶ್ ಆರ್. ಪ್ರಶಸ್ತಿ ಪ್ರದಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net