

ಶಿರ್ವ: ಪಾಲಕರು ಮಕ್ಕಳ ಶೈಕ್ಷಣಿಕ ವಿಷಯದೊಂದಿಗೆ ಕ್ರೀಡೆ, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ವಿದೇಶಗಳಂತೆ ನಮ್ಮಲ್ಲೂ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಸಾಮರ್ಥ್ಯ ಎಳವೆಯಲ್ಲೇ ಹೊರಗೆಳೆದರೆ ಮಾತ್ರ ನಮ್ಮ ದೇಶದ ಕ್ರೀಡಾ ಭವಿಷ್ಯ ಉಜ್ವಲವಾಗಲಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಉಡುಪಿ ಶಾಲಾ ಶಿಕ್ಷಣ ಇಲಾಖೆ, ಶಿರ್ವ ಹಿಂದು ಪಪೂ ಕಾಲೇಜು ಆಶ್ರಯದಲ್ಲಿ ಶಿರ್ವದ ಹಿಂದು ಪಪೂ ಕಾಲೇಜು ಕ್ರೀಡಾಂಗಣದಲ್ಲಿ ಗುರುವಾರ ಉಡುಪಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ಥ್ರೋಬಾಲ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾವರ್ಧಕ ಸಂಘ ಸಂಚಾಲಕ ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘ ಗೌರವಾಧ್ಯಕ್ಷ ಸಚ್ಚಿದಾನಂದ ಹೆಗ್ಡೆ, ಉಡುಪಿ ಜಿಲ್ಲಾ ಪಪೂ ವಿಭಾಗ ಕ್ರೀಡಾ ಮೇಲ್ವಿಚಾರಕ ದಿನೇಶ್ ಕುಮಾರ್, ಶಿರ್ವ ಎಂಎಸ್‌ಆರ್‌ಎಸ್ ಕಾಲೇಜು ಪ್ರಾಂಶುಪಾಲ ಡಾ.ಮಿಥುನ್ ಚಕ್ರವರ್ತಿ, ಶಿರ್ವ ಗ್ರಾಪಂ ಅಧ್ಯಕ್ಷ ರತನ್ ಶೆಟ್ಟಿ ಕಾಪು ವಲಯ ಕ್ರೀಡಾ ಮೇಲ್ವಿಚಾರಕ ಜೋಸೆಫ್ ಡಿಸೋಜ, ಕುಂದಾಪುರ ವಲಯ ಕ್ರೀಡಾ ಮೇಲ್ವಿಚಾರಕ ವಿಜಯಕುಮಾರ್ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ಅಧ್ಯಕ್ಷ ಸತೀಶ್ ಹೆಗ್ಡೆ, ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ದೇವೇಂದ್ರ ಹೆಗ್ಡೆ, ಹಿಂದು ಪ್ರೌಢಶಾಲೆ ಮುಖ್ಯ ಶಿಕ್ಷಕಿ ವಸಂತಿ ಬಾಯಿ, ಶಿರ್ವ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು. ಶಿರ್ವ ಹಿಂದು ಪಪೂ ಕಾಲೇಜು ಪ್ರಾಂಶುಪಾಲ ಭಾಸ್ಕರ ಎ. ಸ್ವಾಗತಿಸಿದರು. ಉಪನ್ಯಾಸಕ ಸುಂದರ ಮೇರ ವಂದಿಸಿದರು. ಉಪನ್ಯಾಸಕಿಯರಾದ ಯಶೋದಾ ಎಲ್ಲೂರು, ಸುಪ್ರಿತಾ ಶೆಟ್ಟಿ ನಿರೂಪಿಸಿದರು.