ಸ್ಥಳೀಯ ಸಮಸ್ಯೆಗಳತ್ತ ಬೆಳಕು ಚೆಲ್ಲಿ

22mdk03
Published on

ಮಡಿಕೇರಿ: ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಸ್ಥಳೀಯ ಸಮಸ್ಯೆಗಳ ಪರಿಹಾರ ಕುರಿತು ಬೆಳಕು ಚೆಲ್ಲುವ ಕೆಲಸ ಪತ್ರಕರ್ತರಿಂದಾಗಬೇಕು ಎಂದು ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಸಲಹೆ ನೀಡಿದರು.


ಭಾನುವಾರ ನಗರದ ಹೊರ ವಲಯದ ಕ್ಯಾಪಿಟಲ್ ವಿಲೇಜ್ ಸಭಾಂಗಣದಲ್ಲಿ ನಡೆದ 2024-27ನೇ ಸಾಲಿನ ಕೊಡಗು ಪ್ರೆಸ್‌ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಪ್ರೆಸ್‌ಕ್ಲಬ್ ರಜತ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಪತ್ರಕರ್ತರಿಗೆ ಮರೆಯಲಾಗದ ನೆನಪನ್ನು ನೀಡಿದೆ. ಪತ್ರಕರ್ತರಿಗೆ ಮಾತ್ರವಲ್ಲದೆ ಎಲ್ಲ ವರ್ಗದವರನ್ನು ಸೇರಿಸಿಕೊಂಡು ಒಂದು ವರ್ಷ ಕಾರ್ಯಕ್ರಮ ರೂಪಿಸಿದ್ದು ಮೈಲಿಗಲ್ಲಾಗಿದೆ. ಸಂಘಟನೆ ಸಾರಥ್ಯ ವಹಿಸಿಕೊಳ್ಳುವುದು ಅತೀ ದೊಡ್ಡ ಜವಾಬ್ದಾರಿಯಾಗಿದೆ.


ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತರು ಸಂಘಟನಾತ್ಮಕವಾಗಿ ಮುಂದುವರಿಯಬೇಕಾದ ಅನಿವಾರ್ಯತೆ ಇದೆ. ಪತ್ರಕರ್ತರ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.


ನೂತನ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್, ಖಜಾಂಚಿ ಸಿ.ಪಿ.ತೇಜಸ್, ಸಂಘಟನಾ ಕಾರ್ಯದರ್ಶಿ ಕೆ.ಜೆ.ಶಿವರಾಜ್, ಸಹಕಾರ್ಯದರ್ಶಿ ವಿ.ವಿ.ಅರುಣ್ ಕುಮಾರ್, ನಿರ್ದೇಶಕರಾದ ಕೆ.ಎಂ.ವಿನೋದ್, ಮಾಗುಲು ಲೋಹಿತ್, ಕೆ.ಎಂ.ಇಸ್ಮಾಯಿಲ್ ಕಂಡಕೆರೆ, ಲೋಕೇಶ್ ಕಾಟಕೇರಿ, ಬಿ.ಜಿ.ಮಂಜು, ಬಿ.ಆರ್.ಸವಿತಾ ರೈ, ಮಚ್ಚಮಾಡ ಅನಿಶ್ ಮಾದಪ್ಪ ಅಧಿಕಾರ ಸ್ವೀಕರಿಸಿದರು.


ನಿರ್ಗಮಿತ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಪ್ರಜ್ಞಾ ರಾಜೇಂದ್ರ, ಆನಂದ್ ಕೊಡಗು, ಕೆ.ಜಿ.ಶಿವರಾಜು, ತೇಜಸ್ ಪಾಪಯ್ಯ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net