

ಮೂಡಲಗಿ: ಹನ್ನೆರಡನೇ ಶತಮಾನದ ವಚನ ಚಳವಳಿಯ ಪ್ರಮುಖ ವ್ಯಕ್ತಿಯಾಗಿದ್ದ ಹಡಪದ ಅಪ್ಪಣ್ಣ ಅವರು, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ಉಪನ್ಯಾಸಕ ಸುರೇಶ ಲಂಕೇಪ್ಪನವರ ಹೇಳಿದರು.
ಪಟ್ಟಣದ ಕೆಇಬಿ ಪ್ಲಾಟ್ ಹತ್ತಿರದ ಅಪ್ಪಣ್ಣ ದೇವಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ಹಾಗೂ ಹಡಪದ ಸಮುದಾಯದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಚನ ಶ್ರಾವಣ ಕಾರ್ಯಕ್ರಮದ ಅಂಗವಾಗಿ ಹಡಪದ ಅಪ್ಪಣ್ಣನವರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರಾವಣ ಮಾಸದಲ್ಲಿ ಇಂತಹ ಸತ್ಸಂಗದಲ್ಲಿ ಪಾಲ್ಗೊಳ್ಳುವುದರಿಂದ ಬದುಕು ಸಾರ್ಥಕವಾಗುತ್ತದೆ ಎಂದರು.
ಶಿವಬಸು ಸುಣದೋಳಿ, ಕಸಾಪ ಅಧ್ಯ ಡಾ.ಸಂಜಯ ಶಿಂದಿಹಟ್ಟಿ, ಬಿ.ವೈ.ಶಿವಾಪುರ, ಎ.ಎಚ್.ಒಂಟಗೋಡಿ, ಶಿವಕುಮಾರ ಕೋಡಿಹಾಳ, ಶಂಕರ ಉದಗಟ್ಟಿ, ಲಕ್ಷ$್ಮಣ ಉದಗಟ್ಟಿ, ಮಲ್ಲಪ್ಪ ನಾವಿ, ಮಹಾಂತೇಶ ಹಡಪದ ಇತರರಿದ್ದರು. ಬಿ.ಆರ್.ತರಕಾರ ನಿರೂಪಿಸಿದರು.